


ನವದೆಹಲಿ: ಕೋವಿಡ್-19 ಹಿನ್ನೆಲೆ ವಿಧಿಸಲಾಗಿರುವ ನಿರ್ಬಂಧದ ಅನ್ ಲಾಕ್ 2.0 ಜು. 31ರಂದು ಅಂತ್ಯವಾಗಲಿದ್ದು, ಆಗಸ್ಟ್ 1 ರಿಂದ ಅನ್ ಲಾಕ್ 3.0 ಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಲು ಸಿದ್ಧವಾಗಿದೆ. ಈ ಬಗ್ಗೆ ಇಂದು ಪ್ರದಾನ ಮಂತ್ರಿ ರಾಜ್ಯಗಳ ಸಿ.ಎಂ. ಗಳ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಅನ್ ಲಾಕ್ 3.0 ಆಗಸ್ಟ್ 1ರಿಂದ ಕೇಂದ್ರ ಸರ್ಕಾರ ಜಾರಿಗೆ ತರಲಿದ್ದು, ಜುಲೈ 31 ರಂದು ಮುಗಿಯಲಿರುವ ಅನ್ ಲಾಕ್ 2.0 ನಲ್ಲಿ ಹಲವು ವಿಷಯಗಳಿಂದ ನಿರ್ಬಂಧ ಸಡಿಲಿಸಿ ಹೊಸ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಬಹುದು. ಇನ್ನಷ್ಟು ನಿರ್ಬಂಧ ಸಡಿಲಿಸಬಹುದು ಎಂದು ಹೇಳಲಾಗುತ್ತಿದೆ. ಆಗಸ್ಟ್ 1ರಿಂದ ನಿರ್ದಿಷ್ಟ ಕಾರ್ಯವಿಧಾನ, ಸಾಮಾಜಿಕ ಅಂತರ ಕಾಯ್ದುಕೊಂಡು ಸಿನೆಮಾ ಹಾಲ್, ಜಿಮ್ ತೆರೆಯಲು ಕೇಂದ್ರ ಸರ್ಕಾರ ಅವಕಾಶ ನೀಡಬಹುದು ಎಂದು ಊಹಿಸಲಾಗಿದೆ. ಆದರೆ, ಮೂರನೇ ಅನ್ ಲಾಕ್ ಹಂತದಲ್ಲಿ ಮೆಟ್ರೋ ಸಂಚಾರ ಸೇವೆ, ಶಾಲಾ ಕಾಲೇಜುಗಳಿಗೆ ನಿರ್ಬಂಧ ಮುಂದುವರಿಯಬಹುದು.





