ಬಂಟ್ವಾಳ: ಮಂಗಳೂರು ವಿಭಾಗದ ಗ್ರಾಮ ವಿಕಾಸ ಸಮಿತಿ, ದ.ಕ.ಜಿಲ್ಲಾ ಸಹಕಾರ ಭಾರತಿ ಮತ್ತು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಭಾಗಿತ್ವದಲ್ಲಿ ಶ್ರೀ ರಾಮ ಭಜನಾ ಮಂದಿರದ ಮಾದವ ಸಭಾ ಭವನದಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಕಾರ್ಯಕ್ರಮ ಇಂದು ಬೆಳಿಗ್ಗೆ ನಡೆಯಿತು.
ಹೈನುಗಾರಿಕೆ, ಕೃಷಿಯಂತ್ರೋಪಕರಣ ಬಳಕೆ ಮತ್ತು ದುರಸ್ತಿ ಹಾಗೂ ಪ್ಯಾಬ್ರಿಕೇಶನ್ ಮತ್ತು ವೆಲ್ಡಿಂಗ್ ಈ ಮೂರು ವಿಷಯಗಳ
ಬಗ್ಗೆ ನಿರಂತರ ಮೂವತ್ತು ಗಂಟೆಗಳ ಕಾಲ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಮಾತನಾಡಿ, ಶೈಕ್ಷಣಿಕ ಅವಧಿ ಮುಗಿದ ಬಳಿಕ ಉದ್ಯೋಗದ ದಿಕ್ಕು ತೋರಿಸುವ ಮತ್ತು ಆತ್ಮ ಸ್ಥೈರ್ಯ ಕೊಡುವ ಉದ್ದೇಶದಿಂದ ಉದ್ಯೋಗ ನೈಪುಣ್ಯ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ಹೇಳಿದರು. ಸರ್ಕಾರದ ಬೇರೆ ಬೇರೆ ಯೋಜನೆ ಗಳನ್ನು ಬಳಸಿಕೊಂಡು ಸ್ವ ಉದ್ಯಮ ಮಾಡುವ ಧೈರ್ಯ ಬೆಳಸಲು ಸಹಕಾರಿಯಾಗುವುದು ಎಂದು ಅವರು ಹೇಳಿದರು. ಈ ಜಿಲ್ಲೆಯ ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗ ಸಿಗಬೇಕು ಎಂಬ ಆಶಾ ಭಾವನೆ ನಮ್ಮದು , ಹಾಗಾಗಿ ಇಂತಹ ಉದ್ಯೋಗ ತರಬೇತಿ ಶಿಬಿರಗಳ ಮೂಲಕ ಪ್ರದಾನಿಮೋದಿಯವರ “ಆತ್ಮನಿರ್ಭರ ” ಭಾರತದ ಕನಸು ನನಸು ಮಾಡಲು ಯುವಕರು ಮನಸ್ಸು ಮಾಡಿ ಎಂದು ಅವರು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ, ಹೊಸದಿಂಗಂತ ಪತ್ರಿಕೆಯ ಸಿ..ಇ.ಒ.
ಪ್ರಕಾಶ್ ಪಿ.ಎಸ್. ಅವರು ಆಶಯ ಮಾತುಗಳನ್ನಾಡಿದರು. ಜಗತ್ತು ಬೆಳೆದಿರುವುದು ಕೇವಲ ನೈಪುಣ್ಯತೆ ಯಿಂದ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದರು. ನೈಪುಣ್ಯತೆ ಯ ಜೊತೆ ಮನುಷ್ಯನ ಉದ್ಯೋಗ ವ್ಯವಹಾರಗಳ ಯಶಸ್ಸಿನ ಹಿಂದೆ ಸಂಬಂಧ ಗಳು , ಮಾತುಕತೆಗಳು ಬಹಳ ಉತ್ತಮವಾಗಿರಬೇಕು. ಪ್ರಸ್ತುತದ ಸ್ಥಿತಿಯಲ್ಲಿ ಭಾರತದ ಪ್ರಾಚೀನ ನಂಬಿಕೆಗಳೇ ಸರಿ ಎಂಬ ತೀರ್ಮಾನಕ್ಕೆ ಜನ ಬರುವಂತೆ ಪರಿಸ್ಥಿತಿ ನಿರ್ಮಾಣ ಮಾಡಿದೆ. ಉತ್ತಮ ಆರ್ಥಿಕ ವ್ಯವಸ್ಥೆ ಗಳ ಮೂಲಕ ಜಗತ್ತು ನಡೆಯಬೇಕಾಗಿದೆ ಆದಕ್ಕೆ ಸ್ವ ಉದ್ಯೋಗ ಜೊತೆಗೆ ನೈಪುಣ್ಯತೆ ಆತ್ಮ ಸ್ಥೈರ್ಯ ಬೇಕಾಗಿದೆ ಅವರು ಹೇಳಿದರು.ಗ್ರಾಮಗ್ರಾಮದ ಪ್ರತಿಯೊಬ್ಬ ವ್ಯಕ್ತಿಯೂ ಉದ್ಯೋಗ ವಂತರಾಗಬೇಕು, ಆರ್ಥಿಕ ಚೇತರಿಕೆಯಾಗಬೇಕು, ಅ ಮೂಲಕ ಭವ್ಯ ಭಾರತ ನಿರ್ಮಾಣವಾಗಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಯೋಚನೆಯಾಗಿದೆ ಎಂದರು.

ಮುಖ್ಯ ಅತಿಥಿ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಯ ಸಂಚಾಲಕ ಮುರಳೀಧರ್ ಅವರು ಮಾತನಾಡಿ ನಾವು ಉತ್ತಮ ಗುಣಮಟ್ಟದ ತರಬೇತಿ ಪಡೆದು ಬಳಿಕ ಮೌಲ್ಯಯುತವಾದ ಉದ್ಯೋಗ ವ್ಯವಹಾರದ ಮೂಲಕ ಪ್ರಸಿದ್ಧ ಪಡೆಯುವ ಯೋಜನೆ ಯೋಚನೆ ಹಾಕಿಕೊಳ್ಳಲು ಅವರು ತಿಳಿಸಿದರು. ಆಳವಾಗಿ ಅಧ್ಯಯನ ಮಾಡಿದಾಗ ಅತೀ ಎತ್ತರಕ್ಕೆ ಬೆಳೆಯಲು ಸಹಕಾರಿ ಯಾಗುತ್ತದೆ.

ಶ್ರೀರಾಮ ಮಂದಿರದ ಅಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್ ಅವರು ಸ್ವಾಗತಿಸಿ, ಶ್ರೀರಾಮ ಸೊಸೈಟಿಯ ಉಪಾಧ್ಯಕ್ಷ ಸುಜಿತ್ ಕೊಟ್ಟಾರಿ ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಆಶಯ ಗೀತೆ ಹಾಡಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here