ಬಂಟ್ವಾಳ: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಮತ್ತು ಸಿದ್ದಕಟ್ಟೆ ಘಟಕದಿಂದ ಕಾರ್ಗಿಲ್ ದಿನಾಚರಣೆಯನ್ನು ನಿವೃತ್ತ ಯೋಧರನ್ನು ಸಮ್ಮಾನಿಸಿ ಗೌರವಿಸುವ ಮೂಲಕ ಸಿದ್ದಕಟ್ಟೆಯಲ್ಲಿ ಆಚರಿಸಲಾಯಿತು.
ಸಿದ್ದಕಟ್ಟೆ, ಉರುಡಂಗೆ ನಿವಾಸಿ, ನಿವೃತ್ತ ಯೋಧ ರಾಜೇಶ್ ಶೆಟ್ಟಿಗಾರ್ ಅವರ ನಿವಾಸದಲ್ಲಿ ಅವರನ್ನು ಸಮ್ಮಾನಿಸಲಾಯಿತು. ರಾಜೇಶ್ ಶೆಟ್ಟಿಗಾರ್ ಅವರು 1994 ರಲ್ಲಿ ಸೇನೆಗೆ ಸೇರ್ಪಡೆಗೊಂಡು 23 ವರ್ಷಗಳ ಕಾಲ ಅರೆಸೇನಾಪಡೆಯಲ್ಲಿ ಸೇವೆ ಸಲ್ಲಿಸಿ 2017ರಲ್ಲಿ ನಿವೃತ್ತಿ ಹೊಂದಿದ್ದರು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವ ಮೂಲಕ ಭಾರತ ಮಾತೆಯ ಸೇವೆಗೆ ಮುಂದಾಗಬೇಕು ಎಂದರು. ವಿದ್ಯಾರ್ಥಿ ಪರಿಷತ್‌ನ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಬಿವಿಪಿ ತಾಲೂಕು ಸಂಚಾಲಕg ಹರ್ಷಿತ್ ಕೊಲ, ತಾಲೂಕು ಸಹ ಸಂಚಾಲಕ ದಿನೇಶ್ ಕೊಲ, ನಗರ ಸಹಕಾರ್ಯದರ್ಶಿ ನಾಗರಾಜ್, ಘಟಕದ ಅಧ್ಯಕ್ಷ ಗುರುಪ್ರಸಾದ್, ಕಾರ್ಯಕರ್ತರಾದ ರಾಜೇಶ್, ದೀಪಕ್, ಪ್ರಜ್ವಲ್, ಕಿರಣ್,ಪ್ರದೀಪ್,ಶಿವುಕುಮಾರ್ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here