



ಬಂಟ್ವಾಳ: ಕ್ಯಾನ್ಸರ್ ಪೀಡಿತ ಬಾಲಕನ ಚಿಕಿತ್ಸೆಗೆ ಮತ್ತು ಬಡ ಕುಟುಂಬದ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಂಗಳ ಕಾರ್ಯಕ್ಕೆ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ವತಿಯಿಂದ ಬಿ.ಸಿ. ರೋಡ್ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಧನ ಸಹಾಯ ಹಸ್ತಾಂತರ ಕಾರ್ಯಕ್ರಮ ಜರಗಿತು.
ಎಲುಬು ಕ್ಯಾನ್ಸರ್ ಗೆ ಒಳಗಾಗಿ ಮಂಗಳೂರಿನ ಅತ್ತಾವರದ ಕೆ.ಎಂ.ಸಿ. ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಕುಮೇರು ದಿ. ಸುಂದರ ಪೂಜಾರಿ ಚಂಪ ದಂಪತಿಗಳ ಪುತ್ರ ಸುಶಾಂತ್ ಇವರ ಚಿಕಿತ್ಸೆಗೆ ರೂ. 15,000 ಮತ್ತು ತಂದೆ ಮತ್ತು ಅಣ್ಣನನ್ನು ಕಳೆದುಕೊಂಡು ತನ್ನ ತಾಯಿಯ ಜೊತೆ ವಾಸಿಸುತ್ತಿರುವ ಬೆಳ್ತಂಗಡಿ ತಾಲೂಕು ಶಿರ್ಲಾಲು ದಿ. ತಿಮ್ಮಪ್ಪ ಮತ್ತು ಜಾನಕಿ ದಂಪತಿಗಳ ಪುತ್ರಿ ರೇವತಿ ಅವರ ಮದುವೆ ಮಂಗಳ ಕಾರ್ಯಕ್ಕೆ ಹಾಗೂ ಮಂಗಳೂರು ತಾಲೂಕಿನ ಸೋಮೇಶ್ವರ ಸಮೀಪದ ಕುಂಪಲದ ಬಡ ಕುಟುಂಬ ಭಾಸ್ಕರ ಮತ್ತು ಪದ್ಮಾವತಿ ದಂಪತಿಗಳ ಪುತ್ರಿ ಪ್ರಜ್ಞಾ ಇವರ ಮದುವೆ ಮಂಗಳ ಕಾರ್ಯಕ್ಕೆ ತಲಾ ರೂ. 10,000 ಧನ ಸಹಾಯ ಹಸ್ತಾಂತರಿಸಲಾಯಿತು. ಈ ಸಮಯದಲ್ಲಿ ಸಂಸ್ಥೆಯ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.






