ಬೆಳ್ತಂಗಡಿ: ಕರಾವಳಿಯಲ್ಲಿ ಸ್ಲೀಪರ್ ಸೆಲ್ ಗಳು ಸದ್ದಿಲ್ಲದೆ ಕಾರ್ಯ ಪ್ರಯತ್ನ ನಡೆಸುತ್ತಿದೆಯಾ ಎಂಬ ಅನುಮಾನಕ್ಕೆ ಮತ್ತಷ್ಟು ಸಾಕ್ಷೀಕರಿಸುವಂತೆ ಇದೀಗ ನಿಷೇಧಿತ ಸ್ಯಾಟಲೈಟ್​ ಫೋನ್​ಗಳು ಆಕ್ಟಿವ್ ಆಗಿರುವ ಕುರಿತು ರಾ ಏಜಿನ್ಸಿ ಸಿಗ್ನಲ್ ಪತ್ತೆಹಚ್ಚಿದೆ.
ಕೊರಿಯಾ ದೇಶದ ತುರಾಯಾ ಬ್ರಾಂಡ್‌ನ ಸ್ಯಾಟಲೈಟ್ ಫೋನ್‌ ಆ್ಯಕ್ಟಿವ್ ಆಗಿದ್ದು, ಕಳೆದ 6 ದಿನಗಳಲ್ಲಿ 2 ಬಾರಿ ಸ್ಯಾಟಲೈಟ್ ಫೋನ್ ಸಂಪರ್ಕವನ್ನು ಸಾಧಿಸುವ ಪ್ರಯತ್ನ ನಡೆದಿದೆ. ಈ ಸಂಬಂಧ ಗುಪ್ತಚರ ಹಾಗೂ ಆಂತರಿಕ ಭದ್ರತಾ ಇಲಾಖೆಯ ಅಧಿಕಾರಿಗಳು ತಮ್ಮ ತನಿಖೆಯನ್ನು ಮುಂದುವರಿಸಿವೆ.
ಕಳೆದ ಕೆಲ ದಿನಗಳ ಹಿಂದೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಾಲು, 15 ದಿನಗಳ ಹಿಂದೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಕಿಲ್ಲೂರು ಹಾಗೂ ಕಾರ್ಕಳದ ಬಜಗೋಳಿ ಭಾಗಗಳಲ್ಲಿ ಆಗಾಗ ಸಾಟಲೈಟ್​ ಫೋನ್ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತವೆ ಎಂದು ಗುಪ್ತಚರ ಸಂಸ್ಥೆ ಮಾಹಿತಿ ನೀಡಿದೆ.
2019ರಲ್ಲಿ ಜೂನ್ ನಿಂದ ಆಗಸ್ಟ್ ಮಧ್ಯದಲ್ಲಿ ಬೆಳ್ತಂಗಡಿ ತಾಲೂಕಿನ ಗೋವಿಂದೂರಿನಲ್ಲಿ ಇಂತಹ ಘಟನೆ ನಡೆದಿತ್ತು. ಇಲ್ಲಿಗೆ ಅಧಿಕಾರಿಗಳು ಬಂದು ತನಿಖೆ ನಡೆಸಿ ಹೋಗಿದ್ದರು.
2008ರ ಮುಂಬೈ ದಾಳಿ ವೇಳೆ ಭಯೋತ್ಪಾದಕರು ‘ತುರಾಯಾ’ ಸ್ಯಾಟಲೈಟ್ ಫೋನ್ ಬಳಸಿದ್ದರು. ಈ ದಾಳಿ ನಂತರ ಭಾರತದಾದ್ಯಂತ ‘ತುರಾಯಾ’ ಸ್ಯಾಟಲೈಟ್ ಫೋನ್ ಗಳನ್ನು ನಿಷೇಧ ಮಾಡಲಾಗಿದೆ.
ಆದರೆ ಇದೀಗ ಮಗದೊಮ್ಮೆ ಸ್ಯಾಟಲೈಟ್ ಫೋನ್ ಗಳು ಆಕ್ಟಿವ್ ಆಗಿರುವ ಕುರಿತು ಆಂತರಿಕ ಭದ್ರತಾ ದಳ ತನಿಖೆ ಮುಂದುವರೆಸಿರುವ ಕುರಿತು ಮೂಲಗಳಿಂದ ಮಾಹಿತಿ ಸಿಕ್ಕಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here