


ಬಂಟ್ವಾಳ: ಬಿ.ಸಿ.ರೋಡು ಪೊಲೀಸ್ ಲೇನ್ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಬಿ.ಸಿ.ರೋಡು ಅಲೆತ್ತೂರು ನಿವಾಸಿ ಮಹಾಬಲ(59) ಮೃತಪಟ್ಟ ವ್ಯಕ್ತಿ.
ಅವರು ದೇವಸ್ಥಾನದ ಸಮೀಪದ ಸರಕಾರಿ ಬಾವಿಯ ಪಂಪು ದುರಸ್ತಿ ಪಡಿಸುವ ವೇಳೆ ಕಾಲು ಜಾರಿ ನೀರಿಗೆ ಬಿದ್ದಿರುವ ಕುರಿತು ಸಂಶಯಿಸಲಾಗಿದೆ. ಕಳೆದ ವರ್ಷಗಳಿಂದ ಅವರು ದೇವಸ್ಥಾನದಲ್ಲಿ ಪರಿಚಾರಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಎಲ್ಲರಿಗೂ ಆತ್ಮೀಯರಾಗಿದ್ದರು. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





