


ಬಳಂಜ: ನಂಬಿಕೆಗಳ ಆಗರವಾಗಿರುವ ತುಳುನಾಡಿನಲ್ಲಿ ಭಕ್ತರ ನಂಬಿಕೆಗೆ ಸಾಕ್ಷಿಯಾಗುವಂತೆ ಬಳಂಜದ ಬದಿನಡೆ ಶಾಸ್ತಾರ ಬ್ರಹ್ಮಲಿಂಗೆಶ್ವರ ದೇವಸ್ಥಾನದಲ್ಲಿ ಬಳ್ಳಿಯೊಂದು ನಾಗನ ಹೆಡೆಯ ರೀತಿ ಕಂಡು ಬಂದು ವಿಸ್ಮಯ ಮೂಡಿಸಿದೆ.
ದೇವರ ಗರ್ಭಗುಡಿಯ ಪಕ್ಕದಲ್ಲಿರುವ ನಾಗದೇವರ ಕಲ್ಲಿನ ಮೂರ್ತಿಯ ಸುತ್ತ ಬಳ್ಳಿಯು ಹಬ್ಬಿದ್ದು ಆ ಬಳ್ಳಿಯಲ್ಲಿ ನಾಗನ ಹೆಡೆಯ ರೀತಿ ಕಂಡುಬಂದಿದೆ.
ಈ ಅಧ್ಬುತ ದೃಶ್ಯ ನೋಡಲು ಭಕ್ತರ ಸಮೂಹವೇ ಆಗಮಿಸುತಿದ್ದು ದೇವರ. ಲೀಲೆಗೆ ಈ ದೃಶ್ಯವೂ ಸಾಕ್ಷಿಯಾಗಿದೆ ಎನ್ನಬಹುದು.





