Sunday, October 22, 2023

ದ.ಕ. ಜಿಲ್ಲೆಯಲ್ಲಿ ಇಂದು 218 ಕೇಸ್ ಪತ್ತೆ: 7 ಸಾವು

Must read

ಬಂಟ್ವಾಳ: ದ.ಕ. ಜಿಲ್ಲೆಯಲ್ಲಿ ಇಂದು 218 ಹೊಸ ಕೊರೋನಾ ಕೇಸ್ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 4214 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ 218 ಕೇಸ್ ಗಳ ಪೈಕಿ 36 ಮಂದಿಗೆ ಪ್ರಾಥಮಿಕ ಸಂಪರ್ಕ ದಿಂದ ಸೋಂಕು ತಗುಲಿದೆ. 110 ಮಂದಿಗೆ ಐ.ಎಲ್.ಐ. ನಿಂದ ಹಾಗೂ 16 ಮಂದಿಗೆ ಸಾರಿ ಯಿಂದ ಬಂದಿದ್ದು, ಇನ್ನುಳಿದ 57 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
ಇಂದು ಜಿಲ್ಲೆಯಲ್ಲಿ 118 ಮಂದಿ ಕೋವಿಡ್ ಸೋಂಕಿನಿಂದ ಮುಕ್ತರಾಗಿದ್ದು, ಈವರೆಗೆ 1862 ಮಂದಿ ಗುಣಮುಖರಾದ ಬಗ್ಗೆ ವರದಿಯಾಗಿದೆ. 2253 ಸಕ್ರೀಯ ಪ್ರಕರಣಗಳಿವೆ ಎಂದು ದ.ಕ.ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲೆಯಲ್ಲಿ ಇಂದು 58 ವರ್ಷದ ಮಹಿಳೆ, 36, 69, 52, 83, 73, 52 ವರ್ಷಗಳ 6 ಪುರುಷರು ಸಹಿತ 7 ಮಂದಿ ಬಲಿಯಾಗಿದ್ದಾರೆ. ಆ ಮೂಲಕ ಈವರೆಗೆ 98 ಮಂದಿ ಬಲಿಯಾದ ಬಗ್ಗೆ ವರದಿಯಾಗಿದೆ.

More articles

Latest article