Wednesday, October 18, 2023

ಕಾನೂನು ಬಾಹಿರ ಪ್ರಾಣಿ ಬಲಿ ನಿಷೇಧಕ್ಕೆ : ವಿಶ್ವಹಿಂದೂ ಪರಿಷತ್ ಬಜರಂಗದಳ ಮನವಿ

Must read

ಬಂಟ್ವಾಳ : ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ, ಕರ್ನಾಟಕ ಗೋಹತ್ಯಾ ನಿಷೇಧ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ, ಸಾರ್ವಜನಿಕ ಸ್ಥಳ, ರಸ್ತೆಗಳಲ್ಲಿ ಪ್ರಾಣಿಗಳನ್ನು ಕಟ್ಟಿ ಹಾಕುವುದಕ್ಕೆ ಇರುವ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸಿ ಗೋವುಗಳು ಸೇರಿದಂತೆ ಬೃಹತ್ ಪ್ರಮಾಣದಲ್ಲಿ ಕಾನೂನು ಬಾಹಿರ ಪ್ರಾಣಿ ಬಲಿಯನ್ನು ತಪ್ಪಿಸುವಂತೆ ಕ್ರಮಕೈಗೊಳ್ಳಲು ವಿಶ್ವ ಹಿಂದೂ ಪರಿಷದ್, ಬಜರಂಗ ದಳ ಬಂಟ್ವಾಳ ಪ್ರಖಂಡ ಬಂಟ್ವಾಳ ತಹಶೀಲ್ದಾರ್ ಅವರಿಗೆ ಮನವಿ ನೀಡಿದೆ.

ರಾಜ್ಯದಲ್ಲಿ ಪ್ರಾಣಿ ಬಲಿ ನಿಷೇದ ಕಾಯ್ದೆ 1959(ತಿದ್ದುಪಡಿ 1975)ಜಾರಿಯಲ್ಲಿದ್ದು, ಅದರ ಪ್ರಕಾರ ಯಾವುದೇ ಪ್ರಾಣಿಗಳನ್ನು ಯಾವುದೇ ಧರ್ಮದವರು ಬಲಿ ಕೊಡುವುದಕ್ಕೆ ನಿಷೇಧವಿದೆ. ಜತೆಗೆ ಗೋಹತ್ಯಾ ನಿಷೇಧ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ- 1964 ಜಾರಿಯಲ್ಲಿದ್ದು, ಅದರ ಪ್ರಕಾರ ದನ, ಕರು, ಎಮ್ಮೆ ಕರುಗಳನ್ನು ವಽಸುದಕ್ಕೆ ಸಂಪೂರ್ಣ ನಿಷೇಧವಿದ್ದು, 12 ವರ್ಷ ದಾಟಿದ ಎತ್ತು, ಕೋಣ, ಎಮ್ಮೆಗಳನ್ನು ಅಽಕೃತ ವಧಾಗಾರದಲ್ಲಿ ಮಾತ್ರ ವಽಸಬಹುದಾಗಿದೆ.
ಆದರೆ ಇವುಗಳನ್ನು ಎಲ್ಲೆಂದರಲ್ಲಿ ಬಲಿ ಕೊಡುವುದಕ್ಕೆ, ವಽಸುವುದಕ್ಕೆ ನಿಷೇಧವಿದೆ. ಹೀಗಾಗಿ ಹಬ್ಬದ ಹೆಸರಿನಲ್ಲಿ ಕಾನೂನು ಬಾಹಿರ ಪ್ರಾಣಿಗಳ ಬಲಿ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಜಾಗೃತಿ ತಂದು ಗೋವಿನ ಕರುಗಳ ಬಲಿಯಾಗದಂತೆ, ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಗೋಮಾತೆಯನ್ನು ಇತರ ವಾಹನಗಳಲ್ಲಿ ಸಾಗಾಟ ಮಾಡುವುದಾಗಲಿ ಅಥವಾ ವಧೆ ಮಾಡುವುದಾಗಲಿ, ಕಂಡರೆ ಮುಂದೆ ಸಾರ್ವಜನಿಕರು ಆಕ್ರೋಶದಲ್ಲಿ ಕೈಗೊಳ್ಳಬಹುದಾದ ಪ್ರತಿಭಟನೆ ಸಹಿತ ಇತರ ಅಹಿತಕರ ಘಟನೆ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ತಾವು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು.
ಕೆಲವೊಂದು ಕಡೆ ಬಲಿ ಕೊಡಲು ಪೂರ್ವಭಾವಿಯಾಗಿ ಸಾರ್ವಜನಿಕ ಸ್ಥಳ, ರಸ್ತೆಗಳು, ಖಾಲಿ ಮೈದಾನ, ಮನೆಯಂಗಳ, ನದಿ ತಟ ಮುಂತಾದೆಡೆ ಮೊದಲೇ ತಂದು ಕಟ್ಟಿ ಹಾಕುತ್ತಿದ್ದು, ಇದು ಕೂಡ ಕಾನೂನುಬಾಹಿರವಾಗಿದೆ. ಅಂತಹ ಪ್ರಾಣಿಗಳನ್ನು ವಶಪಡಿಸಿ ಮುಟ್ಟುಗೋಲು ಹಾಕುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಹಾಗೂ ಬಂಟ್ವಾಳ ಡಿವೈಎಸ್‌ಪಿ ಅವರಿಗೂ ಅವರ ಕಚೇರಿಯ ಮನವಿ ನೀಡಿದ್ದಾರೆ. ಸಂಘಟನೆಯ ಪ್ರಮುಖರಾದ ಸರಪಾಡಿ ಅಶೋಕ್ ಶೆಟ್ಟಿ, ಭರತ್ ಕುಮುಡೇಲ್, ಗುರುರಾಜ್ ಬಂಟ್ವಾಳ, ಸುರೇಶ್ ಬೆಂಜನಪದವು, ಶಿವಪ್ರಸಾದ್ ತುಂಬೆ, ಸಂತೋಷ್ ಕುಲಾಲ್, ಅಭಿನ್ ರೈ, ಅಕೇಶ್ ಅಂಚನ್, ಪ್ರಸಾದ್ ಬೆಂಜನದವು, ವಿನೀತ್ ಉಪಸ್ಥಿತರಿದ್ದರು.

More articles

Latest article