



ಬಂಟ್ವಾಳ: ಮಣಿನಾಲ್ಕೂರು ಗ್ರಾಮದ ನಡುಮೊಗರು ಸರಕಾರಿ ಶಾಲೆಯ ಕಟ್ಟಡ ಮಳೆಗೆ ಕುಸಿದಿದ್ದು, ಘಟನಾ ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಪರಿಶೀಲಿಸಿ, ಶಾಲೆಗೆ ನೂತನ ಕಟ್ಟಡ ನಿರ್ಮಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ತುಂಗಪ್ಪ ಬಂಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಕಂದಾಯ ನಿರೀಕ್ಷಕ ನವೀನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತಿ, ಗ್ರಾಮ ಕರಣಿಕರಾದ ಚನ್ನಬಸವ, ಸುರೇಶ್ ಮೈರಾ, ಬೊಳ್ಳು ಕಲ್ಲು ನಾರಾಯಣ ಪೂಜಾರಿ, ಚಿದಾನಂದ ರೈ, ಶಶಿಕಾಂತ ಶೆಟ್ಟಿ, ಧನಂಜಯ ಶೆಟ್ಟಿ, ಉಮೇಶ್ ಪುಣ್ಕೆದಡಿ, ದಯಾನಂದ ಮುಂಡ್ರಬೈಲು, ಶಿವಾನಂದ, ಶಾಂತಪ್ಪ ಪೂಜಾರಿ, ಕೇಶವ ಎಮ್., ಪುರುಷೋತ್ತಮ ಪೂಜಾರಿ ಮಜಲು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.





