ಬಂಟ್ವಾಳ: ಕೊರೊನಾ ದಿಂದ ಗುಣಮುಖರಾಗಿ ಮನೆಗೆ ಆರೋಗ್ಯವಂತರಾಗಿ ವಾಪಾಸು ಅದ ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ.

ಜುಲೈ 4 ರಂದು ಅವರು ಮಂಗಳೂರು ಖಾಸಗಿ ಆಸ್ಪತ್ರೆಗೆ ಕೋವಿಡ್ ಪಾಸಿಟಿವ್ ಹಿನ್ನೆಲೆಯಲ್ಲಿ ಚಿಕಿತ್ಸೆ ಗಾಗಿ ದಾಖಲಾಗಿದ್ದರು.
ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಗುಣಮುಖರಾಗಿ ಮನೆಗೆ ಬಂದ ಪೂಜಾರಿ ಅವರು ಶೀಘ್ರವಾಗಿ ಗುಣಮುಖರಾಗಿ ಎಂದು ನನ್ನ ಮೇಲೆ ಪ್ರೀತಿಯಿಂದ ಪೂಜೆ ಸಲ್ಲಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಜೊತೆಗೆ ಇವರನ್ನು ಕಾಳಜಿಯಿಂದ ಆಸ್ಪತ್ರೆಯ ಲ್ಲಿ ನೋಡಿಕೊಂಡ ಎಲ್ಲಾ ವೈದ್ಯ ತಂಡಕ್ಕೂ , ದಾದಿಯರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
ಮಾಜಿ ಸಚಿವ ಜೊತೆ ಆಸ್ಪತ್ರೆಗೆ ದಾಖಲಾಗಿದ್ದ ಅವರ ಪತ್ನಿ ಸಹಿತ ಕುಟುಂಬದ ಸದಸ್ಯರು ಕೂಡಾ ಆಸ್ಪತ್ರೆಯಿಂದ ಆರೋಗ್ಯವಂತರಾಗಿ ಡಿಸ್ಚಾರ್ಜ್ ಆಗಿದ್ದಾರೆ.


ಯಾರು ಭಯ ಪಡಬೇಡಿ: ಪೂಜಾರಿ
ಕೊರೊನಾ ಸೊಂಕಿಗೆ ಯಾರು ಕೂಡ ಭಯಪಡದೆ ಧೈರ್ಯವಾಗಿ ಎದುರಿಸಲು ಅವರು ತಿಳಿಸಿದ್ದಾರೆ. ಭಯ ಪಡದೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅವರು ಸಲಹೆ ನೀಡಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here