



ಬೆಳ್ತಂಗಡಿ: ಪಿಕಪ್ ನಲ್ಲಿ ಮೂರು ದನ, ಎರಡು ಕರು ಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದಾಗ ಭಜರಂಗದಳ ಕಾರ್ಯಕರ್ತರು ಹಿಡಿದು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ಮುಂಜಾನೆ 3 ಗಂಟೆಗೆ ನಡೆದಿದೆ.
ಈ ದನಗಳನ್ನು ಬೆಳ್ತಂಗಡಿಯ ಸುರ್ಯ ಪಡ್ಪು ವಿನ ಮನೆಯೊಂದರಿಂದ ಸಾಗಿಸಲಾಗುತ್ತಿದ್ದು ಎಂದು ತಿಳಿದು ಬಂದಿದೆ. ಪ್ರಕರಣದ ಆರೋಪಿಗಳಾದ ರಾಜೇಶ್ ಮತ್ತು ಆತನ ಸಹಚರರು ಪಿಕಪ್ ವಾಹನದೊಂದಿಗೆ ಬರುತ್ತಿದ್ದ ಬೆಂಗಾವಲು ವಾಹನದಲ್ಲಿ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಇದೇ ವೇಳೆ ಅಕ್ರಮವಾಗಿ ದನ ಸಾಗಿಸುತ್ತಿದ್ದ ಇವರದ್ದೇ ಮತ್ತೊಂದು ತಂಡ, ಬೆಂಗಾವಲು ಕಾರಿನ ಸಮೇತ ದನವನ್ನು ಕಸಾಯಿಖಾನೆಗೆ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಅವರನ್ನು ಹಿಡಿಯಲು ಗುರುವಾಯನಕೆರೆ ಬಳಿ ಹೋದಾಗ ಇಬ್ಬರು ಭಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಹಲ್ಲೆಗೊಳಗಾದ ಭಜರಂಗದಳ ಕಾರ್ಯಕರ್ತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಿಕಪ್ ವಾಹನದಲ್ಲಿ ಮಂಗಳೂರಿನ ಕಂಕನಾಡಿಯ ಪಿ.ಕೆ ಚಿಕನ್ ಸೆಂಟರ್ ಹೆಸರಲ್ಲಿ ಪಡೆದ ಕೋವಿಡ್-19 ಪಾಸ್ ಪತ್ತೆಯಾಗಿದೆ ಎಂದು ವರದಿಯಾಗಿದೆ.






