ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಮಂದಿರದ ಶ್ರೀ ರಾಮಾಂಜನೇಯ ಟ್ರಸ್ಟ್ ನ ಉತ್ಸವ ಸಮಿತಿ ಮತ್ತು ಭಜನಾ ಸಮಿತಿಯ ಪ್ರಮುಖರು ಸಾರ್ವಜನಿಕ ಕೃಷ್ಣ ಜನ್ಮಾಷ್ಟಮಿ ಹಾಗೂ ಗಣೇಶೋತ್ಸವ ನಡೆಸುವ ಬಗ್ಗೆ ಸಭೆ ನಡೆಯಿತು. ಶ್ರೀರಾಮ ಮಂದಿರದ ವತಿಯಿಂದ ನಡೆಯುವ 88 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ ಉತ್ಸವ ಮತ್ತು 45ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಬಗ್ಗೆ ಚರ್ಚಿಸಿ ಈ ಬಾರಿಯ ಆಚರಣೆ ಯಾವುದೇ ಸಾರ್ವಜನಿಕ ಕಾರ್ಯಕ್ರಮವಿರದೆ ಸರಳ ರೀತಿಯಲ್ಲಿ ಆಚರಿಸಲು ಸಲಹೆ ವ್ಯಕ್ತವಾಗಿದೆ.

88 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ ಉತ್ಸವದ ಬಗ್ಗೆ ಚರ್ಚಿಸಿ ಈ ಕೆಳಗಿನಂತೆ ತೀರ್ಮಾನಿಸಿದೆ.
ಆಗಸ್ಟ್ 11 ರಂದು ರಾತ್ರಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀರಾಮ ಮಂದಿರದಲ್ಲಿ ರಾತ್ರಿ 8 ರಿಂದ ಚಂದ್ರೋದಯದ ತನಕ ಭಜನೆ ನಡೆಯಲಿದೆ. ಆಗಸ್ಟ್ 12 ರಂದು ಮೊಸರುಕುಡಿಕೆ ಉತ್ಸವದ ಪ್ರಯುಕ್ತ ಮನೆ ಮನೆಗಳಲ್ಲಿ ಮಕ್ಕಳ ಶ್ರೀಕೃಷ್ಣ ವೇಷಧಾರಿಗಳ ವೀಡಿಯೋಗಳ ನೇರ ಪ್ರಸಾರವನ್ನು ಶ್ರೀರಾಮ ಮಂದಿರದ ಫೇಸ್ಬುಕ್ ಪೇಜ್ ನಲ್ಲಿ ವೀಕ್ಷಿಸಬಹುದು (15 ಸೆಂಕೆಡ್ ನ ವೀಡಿಯೋ ಚಿತ್ರೀಕರಣ ನಡೆಸುವ ಸೂಚನೆಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು.) ಎಂದು ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್(ರಿ.) ನ ಅಧ್ಯಕ್ಷರು ತಿಳಿಸಿದ್ದಾರೆ.

45ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಬಗ್ಗೆಯೂ ಈ ಸಮಯದಲ್ಲಿ ಚರ್ಚಿಸಲಾಯಿತು. ಶ್ರೀರಾಮ ಮಂದಿರದಲ್ಲಿ ಆಗಸ್ಟ್ 22 ರಂದು ಬೆಳಿಗ್ಗೆ 9.30 ಗಣಹೋಮ ನಡೆಯಲಿದೆ. ಆಗಸ್ಟ್ 23 ರಂದು ಮನೆ ಮನೆಗಳಲ್ಲಿ ನಡೆಯುವ ಗಣಪತಿ ಪೂಜೆ, ಅಲಂಕಾರ ಮತ್ತು ಮಂದಿರದ ವತಿಯಿಂದ ನೀಡುವ ಭಜನೆಗೆ, ನೃತ್ಯಭಜನೆ ನಡೆಸಿದ ವೀಡಿಯೋದ ನೇರಪ್ರಸಾರ ಶ್ರೀರಾಮ ಮಂದಿರದ ಫೇಸ್ಬುಕ್ ಪೇಜ್ ನಲ್ಲಿ ವೀಕ್ಷಿಸಬಹುದು (15ಸೆಂಕೆಡ್ ನ ವೀಡಿಯೋ ಚಿತ್ರೀಕರಣ ನಡೆಸುವ ಸೂಚನೆಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು.) ಎಂದು ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್(ರಿ.) ನ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here