



ಬಂಟ್ವಾಳ: ಲಾಕ್ ಡೌನ್ ಅವಧಿಯಲ್ಲಿ ಸರಪಾಡಿಯ ಸಂಘಟನೆಯೊಂದು ಭತ್ತದ ಕೃಷಿಯ ಕೆಲಸಕ್ಕೆ ನಾಂದಿಯಾಡಿದೆ.
ಸುಮಾರು ವರ್ಷಗಳಿಂದ ಹಡೀಲು ಬಿದ್ದಿರುವ ಗದ್ದೆಯೊಂದನ್ನು ಮಾಲಕರಿಂದ ಉಚಿತವಾಗಿ ಪಡೆದು ಭತ್ತದ ಕೃಷಿ ಕಾರ್ಯ ನಡೆಸಿದೆ.
ಉಚಿತವಾಗಿ ಪಡೆದ ಗದ್ದೆಯಲ್ಲಿ ಭತ್ತದ ಕೃಷಿ ಮಾಡಿ ಫಸಲನ್ನು ಸಮಾಜದ ಬಡವರ್ಗದ ಜನರಿಗೆ ನೀಡುವ ಉದ್ದೇಶದಿಂದ ಸಂಘಟನೆ ಮುಂದಾಗಿದ್ದು, ಇವರ ಈ ಉತ್ತಮ ಕಾರ್ಯಕ್ಕೆ ಗ್ರಾಮದ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ.
ವಿಶ್ವ ಹಿಂದು ಪರಿಷತ್ತ್ ಭಜರಂಗದಳ ಜೈ ಹನುಮಾನ್ ಶಾಖೆ ಅಜಿಲಮೊಗರು ಸಂಘಟನೆಯ ವತಿಯಿಂದ ಹಡೀಲು ಬಿದ್ದಿರುವ ಗದ್ದೆಯಲ್ಲಿ ವ್ಯವಸಾಯ ಮಾಡಲಾಯಿತು.
ಉದ್ದೇಶ: ಬಡಜನರಿಗೆ ಸಹಾಯ ಮಾಡಬೇಕು ಎಂಬ ಉತ್ತಮ ಉದ್ದೇಶವನ್ನಿಟ್ಟುಕೊಂಡು ಸಂಘಟನೆಯ ಪ್ರಮುಖರು ಸರಪಾಡಿಯಲ್ಲಿ ಅನೇಕ ವರ್ಷಗಳಿಂದ ಹಡೀಲು ಬಿದ್ದಿದ್ದ ನವೀನ್ ಶಾಂತಿ ಎಂಬವರ 4 ಮುಡಿ ಹಡೀಲು ಗದ್ದೆಯನ್ನು ಉಚಿತವಾಗಿ ಪಡೆದು ನೇಜಿ ಕೃಷಿ ಮಾಡಿದರು.
ಈ ಗದ್ದೆಯಲ್ಲಿ ಬರುವ ಅಕ್ಕಿ ಯನ್ನು ಕಡುಬಡವರಿಗೆ ವಿತರಿಸುವುದು ಹಾಗೂ ಬೈ ಹುಲ್ಲನ್ನು ಗೋ ಶಾಲೆಗೆ ನೀಡುವುದೆಂದು ತಿರ್ಮಾನಿಸಿ ಈ ಸಂಘಟನೆ ಕೃಷಿ ಕಾರ್ಯ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಸ.ಸಂಚಾಲಕ್ ಗುರುರಾಜ್ ಬಂಟ್ವಾಳ್, ಪ್ರಖಂಡ ಸಂಚಾಲಕ್ ಶಿವಪ್ರಸಾದ್ ತುಂಬೆ, ಪ್ರಖಂಡ ಸ.ಸಂಚಾಲಕ್ ಸಂತೋಷ್ ಕುಲಾಲ್, ಪ್ರಗತಿಪರ ಕೃಷಿಕ ಪುರುಷೋತ್ತಮ ಪೂಜಾರಿ ಮಜಲು ಹಾಗೂ ಸ್ಥಳ ಧಾನಿಗಳು ಮತ್ತು ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.






