ಬಂಟ್ವಾಳ: ದ. ಕ. ಜಿಲ್ಲಾ ವೈನ್ ಮರ್ಚೆಂಟ್ ಅಸೋಸಿಯೇಷನ್ ಇದರ ವತಿಯಿಂದ ಜಿಲ್ಲಾಡಳಿತದ ಕೋವಿಡ್-19 ನಿರ್ವಹಣೆಗೆ ಪೂರಕವಾಗಿ ಅಗತ್ಯವಿರುವ ಆಂಬುಲೆನ್ಸ್ ಖರೀದಿಸಲು 14.60 ಲಕ್ಷದ ಚೆಕ್ ಅನ್ನು ಸಂಸದ ನಳಿನ್ ಕುಮಾರ್ ಕಟೀಲ್ ಇವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಅಬಕಾರಿ ಉಪ ಆಯುಕ್ತ  ಶೈಲಜಾ ಎ. ಕೋಟೆ , ದ.ಕ. ಜಿಲ್ಲಾ ವೈನ್ ಮರ್ಚಂಟ್ ಅಸೋಶಿಯೇಶನ್ ಇದರ ಜಿಲ್ಲಾಧ್ಯಕ್ಷ ಎಂ. ಗಣೇಶ್ ಶೆಟ್ಟಿ, ಮಂಗಳೂರು ತಾಲೂಕು ಅಧ್ಯಕ್ಷ ಕೆ. ಟಿ. ಸುವರ್ಣ, ಪ್ರಧಾನ ಕಾರ್ಯದರ್ಶಿ ಸಿ. ಎಸ್. ಅಪ್ಪಚ್ಚು, ಕೋಶಾಧಿಕಾರಿ ಚಂದ್ರನಾಥ ಅತ್ತಾವರ, ಜೊತೆ ಕಾರ್ಯದರ್ಶಿ ಓಂಪ್ರಸಾದ್ ಬಿ. ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here