



ಬೆಳ್ತಂಗಡಿ: ತಾಲೂಕಿನ ಶಿರ್ಲಾಲು ಗ್ರಾ.ಪಂ. ವ್ಯಾಪ್ತಿಯ ಕರಂಬಾರು ಕುದುರು ಎಂಬಲ್ಲಿ ಮುಂಬಯಿನಿಂದ ಬಂದಿರುವ ವ್ಯಕ್ತಿಗೆ ಸೋಂಕು ಧೃಡಪಟ್ಟಿದೆ.
ಕರಂಬಾರು ಶಾಲೆಯಲ್ಲಿ ಕ್ವಾರಂಟೈನ್’ನಲ್ಲಿದ್ದು ನಂತರ ಹೋಮ್ ಕ್ವಾರಂಟೈನ್ ಆಗಿದ್ದ ವೇಳೆ ಜ್ವರ ಕಾಣಿಸಿಕೊಂಡು ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ ವರದಿ ಪಾಸಿಟಿವ್ ಬಂದಿದೆ.
ಇವರು ಈಗ ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು ಅವರ ಮನೆ ಹಾಗೂ ಅಕ್ಕ ಪಕ್ಕದ 3 ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.






