



ಬೆಳ್ತಂಗಡಿ: ಕೊರೊನಾ ಅಟ್ಟಹಾಸದ ನಡುವೆ ವರುಣನ ಅರ್ಭಟವು ಹೆಚ್ಚಾಗಿದ್ದು ಬೆಳ್ತಂಗಡಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಜೈನ್ ಪೇಟೆ ಮಾಜಿ ಶಾಸಕ ವಸಂತ ಬಂಗೇರ ನಿವಾಸದ ಎದುರು ಭಾರಿ ಗಾತ್ರದ ಮರ ಬಿದ್ದು ಕೆಲ ಸಮಯ ಸಂಚಾರಕ್ಕೆ ತೊಡಕು ಉಂಟಾಯಿತು.
ಗಾಳಿಯ ರಭಸಕ್ಕೆ 2 ವಿದ್ಯುತ್ ಕಂಬ ಕೂಡ ಮುರಿದು ಬಿದ್ದಿದ್ದು ಟ್ರಾಫಿಕ್ ಪೋಲಿಸ್, ಅರಣ್ಯ ಇಲಾಖೆ, ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಕೈಗೊಂಡರು.






