ಕಲ್ಲಡ್ಕ: 2019-20ನೇ ಸಾಲಿನ ದ್ವಿತೀಯ ಪಿ.ಯು.ಸಿಯ ವಾರ್ಷಿಕ ಪರೀಕ್ಷೆಯಲ್ಲಿ ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ 303
ವಿದ್ಯಾರ್ಥಿಗಳ ಪೈಕಿ 282  ವಿದ್ಯಾರ್ಥಿಗಳು  ತೇರ್ಗಡೆಗೊಂಡು 47 ವಿಶಿಷ್ಟ ಶ್ರೇಣಿ, 179 ಪ್ರಥಮ ಶ್ರೇಣಿ ಪಡೆದು 93%  ಫಲಿತಾಂಶ ಸಾಧಿಸಿದೆ. ವಿಜ್ಞಾನ ವಿಭಾಗದಲ್ಲಿ ಸೌಮ್ಯ 571, ವಾಣಿಜ್ಯ ವಿಭಾಗದಲ್ಲಿ ನವ್ಯ 571, ಕಲಾ ವಿಭಾಗದಲ್ಲಿ ಭಾಗೇಶ್ 517 ಅಂಕ ಪಡೆದು
ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ.

(ಸೌಮ್ಯ 571),ವಿಜ್ಞಾನ ವಿಭಾಗ                  ನವ್ಯ (571),ವಾಣಿಜ್ಯ ವಿಭಾಗ

ಭಾಗೇಶ್ (517),ಕಲಾ ವಿಭಾಗ

ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 205 ವಿದ್ಯಾರ್ಥಿಗಳ ಪೈಕಿ 35 ಅತ್ಯುನ್ನತ ಶ್ರೇಣಿ, 124 ಪ್ರಥಮ ಶ್ರೇಣಿ, 31 ದ್ವಿತೀಯ ಶ್ರೇಣಿ, 11 ತೃತೀಯ ಶ್ರೇಣಿ ಪಡೆಯುವುದರ ಮೂಲಕ  ಶೇಕಡಾ 98% ಫಲಿತಾಂಶ ಪಡೆದಿದೆ.

ವಿಜ್ಞಾನ  ವಿಭಾಗದಲ್ಲಿ ಪರೀಕ್ಷೆ ಬರೆದ 64 ವಿದ್ಯಾರ್ಥಿಗಳ ಪೈಕಿ 11 ಅತ್ಯುನ್ನತ ಶ್ರೇಣಿ, 43 ಪ್ರಥಮ ಶ್ರೇಣಿ, 6 ದ್ವಿತೀಯ ಶ್ರೇಣಿ ಪಡೆಯುವುದರ ಮೂಲಕ ಶೇಕಡಾ 94% ಫಲಿತಾಂಶ ದಾಖಲಾಗಿದೆ.

ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 34 ವಿದ್ಯಾರ್ಥಿಗಳ ಪೈಕಿ 1 ಅತ್ಯುನ್ನತ ಶ್ರೇಣಿ, 12 ಪ್ರಥಮ ಶ್ರೇಣಿ, 05 ದ್ವಿತೀಯ
ಶ್ರೇಣಿ, 03 ತೃತೀಯ ಶ್ರೇಣಿ ಪಡೆಯುವುದರ ಮೂಲಕ  ಶೇಕಡಾ 62% ಫಲಿತಾಂಶ ದಾಖಲಾಗಿದೆ. ಅಲ್ಲದೇ ಅಕ್ಷಯ್ ಡಿ. ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಸಂಖ್ಯಾಶಾಸ್ತ್ರದಲ್ಲಿ, ಪ್ರಣಾಮ್ ಲೆಕ್ಕಶಾಸ್ತ್ರದಲ್ಲಿ, ನಯನ, ಅರ್ಪಿತಾ ವ್ಯವಹಾರ ಅಧ್ಯಯನದಲ್ಲಿ, ಕೌಶಿಕ್, ನಿರೀಕ್ಷಾ ಸಂಖ್ಯಾಶಾಸ್ತ್ರದಲ್ಲಿ, ಕೃಷ್ಣಕಿರಣ್, ಅನುಷಾ ಅರ್ಥಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದಿರುತ್ತಾರೆ. 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here