ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇಂದು 91 ಹೊಸ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2452ಕ್ಕೆ ಏರಿಕೆಯಾಗಿದೆ.
91 ಕೇಸ್ ಗಳ ಪೈಕಿ ಪ್ರಾಥಮಿಕ ಸಂಪರ್ಕದಿಂದ 20 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 29 ಮಂದಿಯಲ್ಲಿ ಐಎಲ್‌‌ಐ ಪ್ರಕರಣ ಪತ್ತೆಯಾಗಿದೆ. 5 ಮಂದಿಯಲ್ಲಿ ಸಾರಿ ಪ್ರಕರಣ ದಾಖಲಾಗಿದೆ. ಅಂತರಾಷ್ಟ್ರೀಯ ಪ್ರಯಾಣದಿಂದ ಮರಳಿದ ನಾಲ್ವರಲ್ಲಿ ಒಬ್ಬರಿಗೆ ಸೋಂಕು ಪತ್ತೆಯಾಗಿದ್ದು, 35 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
ಇಂದು ಜಿಲ್ಲೆಯಲ್ಲಿ 47 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಒಟ್ಟು 985 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. 1414 ಸಕ್ರೀಯ ಪ್ರಕರಣಗಳಿವೆ.
ಇಂದು 55 ಹಾಗೂ 70 ವರ್ಷದ ಇಬ್ಬರು ಪುರುಷರು ಹಾಗೂ 65 ವರ್ಷದ ಮಹಿಳೆ ಸೋಂಕಿಗೆ ಮೃತಪಟ್ಟಿದ್ದು, ಒಟ್ಟು 53 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here