ಬೆಳ್ತಂಗಡಿ: ತಾಲೂಕು‌ ಪರಿಶಿಷ್ಟ ವರ್ಗದ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ (ನಿ) ಲ್ಯಾಂಪ್ಸ್ ಬೆಳ್ತಂಗಡಿ ಇದರ ನೇತ್ರತ್ವದಲ್ಲಿ ಸೋಮಂತಡ್ಕ ಲ್ಯಾಂಪ್ಸ್ ಶಾಖೆಯಲ್ಲಿ ಸಸಿ ವಿತರಣ ಕಾರ್ಯಕ್ರಮ ನಡೆಯಿತು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಸಸಿಯನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಲಿಂಗಪ್ಪ ನಾಯ್ಕ ಉರುವಾಲು, ಜಿ.ಪಂ.ಸದಸ್ಯ ಕೊರಗಪ್ಪ ನಾಯ್ಕ, ವಲಯ ಅರಣ್ಯಾಧಿಕಾರಿ ಸುಬ್ಬ ನಾಯ್ಕ, ಕಾರ್ಯಾದರ್ಶಿ ನೀನಾ ಕುಮಾರ್, ಉಪಾಧ್ಯಕ್ಷ ಸಂತೋಷ್ ನಾಯ್ಕ‌ಅತ್ತಾಜೆ, ನಿರ್ದೇಶಕರಾದ ಚೆನ್ನಕೇಶವ ನಾಯ್ಕ, ಸೀತಾರಾಮ ನಾಯ್ಕ, ವಸಂತ ನಾಯ್ಕ, ಪ್ರಸಾದ್ ನಾಯ್ಕ, ತಿಮ್ಮಪ್ಪ ನಾಯ್ಕ, ಪ್ರಶಾಂತ್.ಎ.ಜೆ, ಲಲಿತ, ಜಯಲಕ್ಷ್ಮೀ, ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು‌‌ ಮತ್ತು ಸಂಘದ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here