ಬಂಟ್ವಾಳ: ಸಜೀಪನಡು ಗ್ರಾಮದ ಕೋಣಿಮಾರು ಎಂಬ ಪ್ರದೇಶದಲ್ಲಿ ಸುಮಾರು 35 ಅಡಿ ಎತ್ತರದಲ್ಲಿ ಕೆಂಪು ಗುಡ್ಡೆ ಎಂಬ ಪುಟ್ಟ ಪ್ರದೇಶವಿದ್ದು, ಪ್ರಸ್ತುತ ಅಲ್ಲಿ ಸುಮಾರು 15 ವಾಸದ ಮನೆಗಳಿವೆ. ಇದೀಗ ಕೆಂಪುಗುಡ್ಡೆಯು ಕುಸಿಯುತ್ತಿದ್ದು, 35 ಅಡಿ ಎತ್ತರದಲ್ಲಿರುವ ಮನೆಗಳ ಬದಿಯಲ್ಲೇ ಕುಸಿತವುಂಟಾಗುತ್ತಿದೆ.
ಅದಲ್ಲದೇ ಆ ಗುಡ್ಡದ ಕೆಳಗಡೆಯೂ ಮನೆಗಳಿದ್ದು, ಗುಡ್ಡದ ಮೇಲಿರುವ ಮನೆಗಳು ಕೆಳಗಡೆ ಇರುವ ಮನೆಗಳ ಮೇಲೆ ಕುಸಿದು ಬೀಳುವ ಹಂತದಲ್ಲಿದ್ದು, ಯಾವುದೇ ಕ್ಷಣದಲ್ಲೂ ಅವಗಡ ಸಂಭವಿಸುವ ಬೀತಿಯಲ್ಲಿ ಸ್ಥಳೀಯ ವಾಸಿಗಳು ದಿನದೂಡುತ್ತಿದ್ದಾರೆ.
ಈ ಬಗ್ಗೆ ಹಲವಾರು ಬಾರಿ ಗ್ರಾ.ಪಂ. ಗೆ ಲಿಖಿತ ದೂರನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಪ್ರದೇಶವು ಗುರುಪುರ ಕೈಕಂಬದ ಇನ್ನೊಂದು ಬಂಗ್ಲಗುಡ್ಡೆಯಾಗುವುದಕ್ಕಿಂತ ಮುಂಚಿತವಾಗಿ ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂಬುವುದು ಗ್ರಾಮಸ್ತರ ಆಗ್ರಹವಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here