



ವಿಟ್ಲ: ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್. ಆರ್. ನಿರ್ದೇಶದಂತೆ ಕಂದಾಯ ಹಾಗೂ ಭೂ ವಿಜ್ಞಾನ ಮತ್ತು ಗಣಿ ಇಲಾಖೆ ಜಂಟಿಯಲ್ಲಿ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 50 ಲೋಡ್ ಮರಳನ್ನು ವಶಕ್ಕೆ ಪಡೆದ ಘಟನೆ ಕೊಳ್ನಾಡು ಗ್ರಾಮದ ಬೊಳ್ಪಾದೆಯಲ್ಲಿ ನಡೆದಿದೆ.
50 ಲೋಡ್ ಮರಳನ್ನು ಖಾಸಗೀ ಹಾಗೂ ಸರ್ಕಾರಿ ಜಾಗದಲ್ಲಿ ಶೇಖರಣೆ ಮಾಡಲಾಗಿತ್ತು. ಭೂ ವಿಜ್ಞಾನ ಮತ್ತು ಗಣಿ ಇಲಾಖೆ ಮರಳನ್ನು ಜಪ್ತಿ ಮಾಡಿ ಕಾನೂನು ಕ್ರಮ ಜರಗಿಸಿದ್ದಾರೆ. ಕಂದಾಯ ಇಲಾಖೆಯಿಂದ ಕಂದಾಯ ನಿರೀಕ್ಷಕ ದಿವಾಕರ ಮುಗುಳ್ಯ, ಗ್ರಾಮಕರಣಿಕ ಅನಿಲ್ ಕುಮಾರ್, ಸಹಾಯಕ ಮಹಾಬಲ, ಗಣಿ ಇಲಾಖೆ ನಿರ್ದೇಶಕಿ ಸುಷ್ಮ ಅಮತ್ತು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.






