Friday, October 20, 2023

ಬೆಳ್ತಂಗಡಿ: ತಾಲೂಕಿನಲ್ಲಿ ಸ್ವಚ್ಛ ಮನೆ ಆಂದೋಲನಕ್ಕೆ ಶಾಸಕ‌ ಹರೀಶ್ ಪೂಂಜಾ ಸೂಚನೆ

Must read

ಬೆಳ್ತಂಗಡಿ: ಕೊರೊನಾ, ಡೆಂಗ್ಯೂ ಮತ್ತಿತರ ಜ್ವರಗಳು‌ ಹೆಚ್ಚಾಗಿರುವ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಸ್ವಚ್ಚ ಮನೆ ಎಂಬ ಆಂದೋಲನವನ್ನು ಪ್ರಾರಂಭಿಸಲು ಶಾಸಕ ಹರೀಶ್ ಪೂಂಜಾ ಆರೋಗ್ಯ ಇಲಾಖೆಗೆ ತಿಳಿಸಿದ್ದಾರೆ.

ತಾಲೂಕಿನಲ್ಲಿ ಡೆಂಗ್ಯೂ ಜ್ವರಕ್ಕೆ ಈಗಾಗಲೇ ಹಲವು ಮಂದಿ ಸಾವನ್ನಪ್ಪಿದ್ದು, ಇನ್ನಷ್ಟು ಅನಾಹುತಗಳನ್ನು ತಪ್ಪಿಸಲು ಸ್ವಚ್ಛ ಮನೆ ಆಂದೋಲನಕ್ಕೆ ಕರೆ ನೀಡಿದ್ದಾರೆ.

ತಾಲೂಕಿನಲ್ಲಿ 2500 ಮನೆಗಳಿಗೆ ಸ್ವಚ್ಛ ಮನೆ ಪ್ರಶಸ್ತಿ ನೀಡುತ್ತೇವೆ ಎಂದು ಶಾಸಕ ಹರೀಶ್ ಪೂಂಜಾ ಘೋಷಿಸಿದರು. ತಾಲೂಕಿನಲ್ಲಿರುವ ಆಶಾ ಕಾರ್ಯಕರ್ತೆಯರು ತಮ್ಮ ಗ್ರಾಮದಲ್ಲಿ ತಮ್ಮ ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡಿರುವ 10 ಮನೆಯನ್ನು ಆಯ್ಕೆ ಮಾಡಬೇಕು‌ ಆಯ್ಕೆಯಾದ 2500 ಮನೆಗಳು ಪ್ರಶಸ್ತಿ ಅರ್ಹ ಎಂದರು.

ಈ‌ ಆಂದೋಲನಕ್ಕೆ ಮುಖ್ಯ ಕಾರಣ ಕ್ಷೇತ್ರ ಆರೋಗ್ಯ ಅಧಿಕಾರಿ ಅಮ್ಮಿಯವರು. ಜುಲೈ8 ರಂದು ನಡೆದ ಸಭೆಯಲ್ಲಿ ಸ್ವಚ್ಚ ಮನೆ ಎಂಬ ಆಂದೋಲನದ ಬಗ್ಗೆ ಪ್ರಸ್ತಾಪವನಿಟ್ಟಿದ್ದರು ಶಾಸಕರು ಶೀಮತಿ ಅಮ್ಮಿಯವರ ಈ ಸ್ವಚ್ಚತಾ ಜಾಗೃತಿಗೆ ಸೈ ಎಂದು ಸ್ವಚ್ಚ ಮನೆ ಎಂಬ ಆಂದೋಲನ ಪ್ರಾರಂಭಿಸಲು ಸೂಚಿಸಿದರು.

ಪಂಚಾಯತ್ ಮತ್ತು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಆಶಾ ಕಾರ್ಯಕರ್ತೆಯರು ತಾಲೂಕಿನ ಪ್ರತೀ ಮನೆಗಳಿಗು ತೆರಳಿ ಸ್ವಚ್ಚತೆಗೆ ಸಂಬಂಧಿಸಿದ ನೋಟೀಸ್ ಮುಟ್ಟಿಸಿ ಜಾಗೃತಿ ಮೂಡಿಸಬೇಕು ಒಂದು ತಿಂಗಳ ನಂತರ ಸರ್ವೆ ನಡೆಸಿ ಪ್ರತಿ 248 ಆಶಾ ಕಾರ್ಯಕರ್ತೆಯರು ಒಬ್ಬೊಬ್ಬರು 10 ಮನೆಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡುವ ಎಂದು ಶಾಸಕರು ತಿಳಿಸಿದರು.

More articles

Latest article