ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಘಟಕದ ಜಿಲ್ಲಾ ಗೃಹರಕ್ಷಕ ದಳದ ಎಲ್ಲಾ 50 ಗೃಹರಕ್ಷಕರಿಗೆ ದ.ಕ. ಜಿಲ್ಲೆಯ ಆಯುಷ್ ಇಲಾಖೆ ನೀಡಿದ ದೇಹದ ರಕ್ಷಣಾ ವ್ಯವಸ್ಥೆಯನ್ನು ಸದೃಢಗೊಳಿಸುವ ಹೊಮಿಯೋಪತಿ ಔಷಧಿಯನ್ನು ಜು.7 ರಂದು ನೀಡಲಾಯಿತು.

ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ|| ಮುರಲೀ ಮೋಹನ್ ಚೂಂತಾರು ಇವರು ಔಷಧಿಗಳನ್ನು ಉಪ್ಪಿನಂಗಡಿ ಘಟಕದ ಘಟಕಾಧಿಕಾರಿ ದಿನೇಶ್ ಬಿ. ಇವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಉಪಸಮಾದೇಷ್ಟ ರಮೇಶ್ ಪೂಜಾರಿ, ಉಪ್ಪಿನಂಗಡಿ ಘಟಕದ ಗೃಹರಕ್ಷಕರಾದ ವಸಂತ, ಜನಾರ್ದನ ಆಚಾರ್ಯ ಇವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಎಂ.ಸಿ.ಎಫ್. ಇದರ ವತಿಯಿಂದ ನೀಡಲಾದ 50 ಸ್ಯಾನಿಟೈಸರ್‌ಗಳನ್ನು ಉಪ್ಪಿನಂಗಡಿ ಘಟಕದ ಗೃಹರಕ್ಷಕರಿಗೆ ನೀಡಲಾಯಿತು. ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಹಿನ್ನೆಲೆಯಲ್ಲಿ ಕೋವಿಡ್ ವಾರಿಯರ್‍ಸ್ ಆಗಿ ಕೆಲಸ ಮಾಡುತ್ತಿರುವ ಗೃಹರಕ್ಷಕರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಸಮಾದೇಷ್ಟ ಡಾ|| ಚೂಂತಾರು ತಿಳಿಸಿರುತ್ತಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here