ಬಂಟ್ವಾಳ: ಪ್ರಸ್ತುತ ಕೋವಿಡ್ -19 ಸಂಕಷ್ಟವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ಶಿಕ್ಷಣ ಕ್ರಮದಲ್ಲಿ ಅನಿವಾರ್ಯವಾಗಿ ಬದಲಾವಣೆಯ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಬೋಧಕನೂ ಆಧುನಿಕ ತಂತ್ರಜ್ಞಾನವನ್ನು ಕಲಿತು, ಅರಗಿಸಿಕೊಂಡು ವಿದ್ಯಾರ್ಥಿಗಳಿಗೆ ಪಾಠ-ಪ್ರವಚನವನ್ನುಮಾಡಬೇಕಾಗಿದೆ. ಕೊರೋನಾ ವೈರಸ್ ಹಾವಳಿಯ ಅನಿಶ್ಚಿತತೆ ಇರುವುದರಿಂದ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಎಲ್ಲ ಶಿಕ್ಷಕ-ಉಪನ್ಯಾಸಕ ವೃಂದದವರೂ ‘ಆನ್ ಲೈನ್ ತರಗತಿ’ ಗೆ ಸನ್ನದ್ಧರಾಗಬೇಕು ಎಂದು ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ ಹೇಳಿದರು.

ಅವರು ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ಬೋಧಕರಿಗೆ ಏರ್ಪಡಿಸಿದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.

ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಮುಂತಾದ ಎಲೆಕ್ಟ್ರಾನಿಕ್ಸ್ ಸಲಕರಣೆಗಳ ಸಹಾಯದಿಂದ ಪರಿಣಾಮಕಾರಿಯಾದ ಆನ್ ಲೈನ್ ತರಗತಿಗಳನ್ನು ನಡೆಸುವುದು ಹೇಗೆ ಎಂಬುದಾಗಿ ಸಂಸ್ಥೆಯ ಸಿಬ್ಬಂದಿ ಹಾಗೂ ತರಬೇತುದಾರ ಯೋಗೀಶ್ ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ಟ್ರಸ್ಟೀ ಬಿ. ಅಬ್ದುಲ್ ಸಲಾಂ ಅವರು ಮಾತನಾಡಿ, ಇಂದಿನ ಪರಿಸ್ಥಿತಿಯನ್ನು ಅರಿತುಕೊಂಡು ಮುನ್ನಡೆಯಬೇಕಾದ ಪರಿಸ್ಥಿತಿ ನಮ್ಮದಾಗಿದ್ದು, ಅದಕ್ಕನುಗುಣವಾಗಿ ಸಕಾರಾತ್ಮಕ ನಡೆಯೊಂದಿಗೆ ಸಾಗಬೇಕಾಗಿದೆ ಎಂದರು.

ಕಾರ್ಯಕ್ರಮ ಸಂಯೋಜಕ ಬಿ. ಅಬ್ದುಲ್ ಕಬೀರ್‍ ಅವರು ಲಾಕ್ ಡೌನ್ ಮತ್ತು ಸೀಲ್ ಡೌನ್ ನಡುವೆಯೂ ಶಿಕ್ಷಣ ಸಂಸ್ಥೆ ತನ್ನ ಕಾರ್ಯಚಟುವಟಿಕೆಗಳನ್ನು, ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ ಬಗ್ಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸಲು ನಾನಾ ಬಗೆಗಳಲ್ಲಿ ಸಹಕರಿಸಿದ ತುಂಬೆ ಗ್ರಾ.ಪಂ. ಸದಸ್ಯರಾದ ಝಹೂರ್ಹ ಗೊ ಪೊಪ್ಯುಲರ್‍ ಫ್ರಂಟ್ ಆಫ್ ಇಂಡಿಯಾ, ಬಂಟ್ವಾಳ ತಾಲೂಕಿನ ಪದಾಧಿಕಾರಿಗಳನ್ನು ಬಿ. ಅಬ್ದುಲ್ ಸಲಾಂ ಗೌರವಿಸಿದರು.

ಈ ಸಂದರ್ಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸಂಸ್ಥೆಯ ಶಿಕ್ಷಕಿ ರೇಖಾ ಅವರನ್ನು ಬಿ. ಅಬ್ದುಲ್ಸಲಾಂ ಮತ್ತು ವಿದ್ಯಾ ಕೆ. ಗೌರವಿಸಿದರು. ಗುರುಪುರದ ಪ್ರಾಕೃತಿಕ ವಿಕೋಪದಲ್ಲಿ ಮತ್ತು ಕೋವಿಡ್ 19 ಸೋಂಕಿನಿಂದ ಮಡಿದ ಸಮಸ್ತರಿಗಾಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.  ತುಂಬೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ ಕೆದಿಲ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here