ಬಂಟ್ವಾಳ : ಬಂಟ್ವಾಳ ತಾ. ಕಾವಳಪಡೂರು ಗ್ರಾಮದ ಮಧ್ವ ಶ್ರೀ ರಾಮ ನಗರದ ಶಿವಾಜಿ ಬಳಗ ಮತ್ತು ಶಿವಾಜಿ ಮಾತೃಬಳಗದ ವತಿಯಿಂದ ಯೋಧರಿಗೆ ನಮನ, ಕೊರೊನಾ ಜಾಗೃತಿ,ಸಸಿ ವಿತರಣೆ ಮತ್ತು ಸ್ವಚ್ಛತಾ ಕಾರ್ಯಕ್ರಮ ಮಧ್ವ ಕೊಡಮಣಿತ್ತಾಯಿ ದೈವಸ್ಥಾನದ ಬಳಿ ನಡೆಯಿತು.


ಈ ಸಂದರ್ಭದಲ್ಲಿ ಗಾಲ್ವಾನ್ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಪರಿಸರದ ಆಶಾ ಕಾರ್ಯಕರ್ತೆಯರನ್ನು ಗೌರವಿಸಲಾಯಿತು. ಗ್ರಾಮಸ್ಥರಿಗೆ ಸಸಿ ವಿತರಿಸಲಾಯಿತು. ಪರಿಸರವನ್ನು ಸ್ವಚ್ಛಗೊಳಿಸಲಾಯಿತು.
ಕಾವಳಪಡೂರು ಗ್ರಾ.ಪಂ. ಪಿಡಿಒ ಶ್ರೀಧರ್, ಪ್ರಮುಖರಾದ ದಿನೇಶ್ ಬಡೆಕೊಟ್ಟು,ಶಿವಾಜಿ ಬಳಗದ ಅಧ್ಯಕ್ಷ ಯದುಷ್ ಮಧ್ವ, ಗೌರವಾಧ್ಯಕ್ಷ ಪ್ರಕಾಶ್ ಮಧ್ವ, ಶಿವಾಜಿ ಮಾತೃ ಬಳಗದ ಉಪಾಧ್ಯಕ್ಷೆ ವಸಂತಿ ಅವರು ಉಪಸ್ಥಿತರಿದ್ದರು.
ಶಿವಾಜಿ ಬಳಗದ ಪ್ರ.ಕಾರ್ಯದರ್ಶಿ ಧನುಷ್ ಮಧ್ವ ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷ ನಾಗೇಶ್ ಮಧ್ವ ಪ್ರಸ್ತಾವನೆಗೈದರು. ಉಪನ್ಯಾಸಕ ಶಿವರಾಜ್ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here