ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜುಲೈ 8 ರಿಂದ 10 ರವರೆಗೆ ಮಂಗಳೂರು ಉಪವಿಭಾಗಕ್ಕೆ ಸಂಬಂಧಪಟ್ಟ ಕಛೇರಿಗಳನ್ನು, ಬಂಟ್ವಾಳ ಮಿನಿ ವಿಧಾನ ಸೌಧದಲ್ಲಿ ಸರ್ಕಾರಿ ಕಚೇರಿಗಳನ್ನು ಹಾಗೂ ಇತರ ಕಛೇರಿಗಳನ್ನು ಸ್ಯಾನಿಟೈಸೇಷನ್ ಮಾಡಲಾಗುತ್ತದೆ.
ಸರಕಾರಿ ಕಚೇರಿಗಳಿಗೆ ದಿನಂಪತ್ರಿ ಸಾರ್ವಜನಿಕರು ಬಂದು ಹೋಗುವುದರಿಂದ ಸೋಂಕು ಹರಡುವ ಸಾಧ್ಯತೆಯಿರುತ್ತದೆ. ಈ ಹಿನ್ನೆಲೆ ಈ ಕ್ರಮ ಕೈಕೊಳ್ಳಲಾಗಿದ್ದು, ಅಂದು ಸಾರ್ವಜನಿಕರ ಪ್ರವೇಶವನ್ನು ಈ ಕಚೇರಿಗಳಿಗೆ ನಿರ್ಬಂಧಿಸಲಾಗಿದೆ ಎಂದು ಮಂಗಳೂರು ಉಪವಿಭಾಗ ಆಯುಕ್ತರ ಪ್ರಕಟಣೆ ತಿಳಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here