ಬೆಳ್ತಂಗಡಿ: ಶಾಸಕ‌ ಹರೀಶ್ ಪೂಂಜಾ ಕೋವಿಡ್ ಟೆಸ್ಟ್ ಮಾಡಿಸಿದ್ದು, ಇದೀಗ ಅದರ ವರದಿ ನೆಗೆಟಿವ್ ಬಂದಿದೆ.

ಜನಸಾಮಾನ್ಯರಾಗಲಿ‌ ಜನಪ್ರತಿನಿಧಿಗಳೇ ಆಗಲಿ ಯಾರನ್ನು ಬಿಡದೆ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ಕೇಸ್ ಗಳು ಜಾಸ್ತಿಯಾಗುತ್ತಿರುವ ಬೆನ್ನಲ್ಲೆ ಬೆಳ್ತಂಗಡಿ ಶಾಸಕರಿಗೂ‌ ಕೊರೊನಾ ಭೀತಿ ಎದುರಾಗಿತ್ತು.

ಬಿಜೆಪಿ ನಾಯಕರೊಬ್ಬರ ಆಪ್ತರು ಶಾಸಕರನ್ನು‌ ಭೇಟಿಯಾಗಿದ್ದು,  ಅವರಿಗೆ ಕೊರೊನಾ ಪಾಸಿಟಿವ್ ಇದ್ದುದಕ್ಕಾಗಿ ಕೂಡಲೇ ಶಾಸಕರು ಮಂಗಳೂರಿನ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡಿದ್ದರು. ಇಂದು ಅದರ ವರದಿ ಬಂದಿದ್ದು, ಕೊರೊನಾ ಗುಣ ಲಕ್ಷಣಗಳು ಕಂಡು ಬಂದಿಲ್ಲ ಹಾಗೂ ವರದಿಯು ನೆಗೆಟಿವ್ ಬಂದಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here