ನವದೆಹಲಿ: ಜಗತ್ತಿನಾದ್ಯಂತ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ಇದರ ಭೀತಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ಸೋಂಕಿಗೆ ಇನ್ನೂ ಯಾವುದೇ ನಿರ್ಧಿಷ್ಟ ಔಷಧವಾಗಲಿ ಅಥವಾ ಲಸಿಕೆಗಳಾಗಲಿ ಲಭ್ಯವಾಗಿಲ್ಲ. ಇಂತಹ ಸಮಯದಲ್ಲಿ ತೆಂಗಿನೆಣ್ಣೆ ಬಳಕೆ ಬಗೆಗಿನ ಚರ್ಚೆಯಾಗುತ್ತಿದೆ. ಇದಕ್ಕೆ ಕೇರಳದಲ್ಲಿ ಸೋಂಕು ಭಾದೆಯ ನಿಯಂತ್ರಣ . ಈ ವಿಚಾರ ಕೆಲವು ವಿಜ್ಞಾನಿಗಳ ಗಮನ ಸೆಳೆದಿದೆ ಹೀಗಾಗಿ ತೆಂಗಿನ ಎಣ್ಣೆಯಲ್ಲಿನ ಹೇರಳ ರೋಗ ನಿರೋಧಕ ಶಕ್ತಿಗಳು ಚರ್ಚೆಯನ್ನು ಹುಟ್ಟು ಹಾಕಿದೆ. ನಿಯಮಿತವಾಗಿ ತೆಂಗಿನಎಣ್ಣೆ ಬಳಕೆಯಿಂದ ಕೊರೊನಾ ನಿಯಂತ್ರಿಸಬಹುದು ಎಂಬ ಸಿದ್ಧಾಂತದಡಿಯಲ್ಲಿ ಕೆಲವು ಸಂಶೋಧಕರು ಜರ್ನಲ್ ಆಫ್ ಅಸೋಸಿಯೇಶನ್ ಫಿಸಿಶಿಯನ್ಸ್ ಇಂಡಿಯಾ(ಜೆ.ಎ.ಪಿ.ಐ.) ಎಂಬ ನಿಯತಕಾಲಿಕೆಯಲ್ಲಿ ಲೇಖನ ಪ್ರಕಟಿಸಿದ್ದಾರೆ.
ತೆಂಗಿನ ಎಣ್ಣೆಯಲ್ಲಿ ಮಾತ್ರ ಲಾರಿಕ್ ಆಸಿಡ್, ಸ್ಯಾಚುರೇಟೆಡ್ ಕೊಬ್ಬಿನ ಆಮ್ಲ ಅಧಿಕ ಪ್ರಮಾಣದಲ್ಲಿ ಇದೆ. ತೆಂಗಿನ ಎಣ್ಣೆಯ ಕೊಬ್ಬಿನಾಂಶದಲ್ಲಿ ಶೇ.50 ರಷ್ಟು ಲಾರಿಕ್ ಆಸಿಡ್ ಇದೆ. ತೆಂಗಿನ ಎಣ್ಣೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಜೀವಕೋಶ ಮತ್ತು ಅಂಗಾಂಶಗಳ ಪುನರ್ ಜೀವನಕ್ಕೆ ಸಹಕಾರಿಯಾಗಿದೆ. ಲಾರಿಕ್ ಆಸಿಡ್ ದೇಹವನ್ನು ಸೇರಿದ ಬಳಿಕ ಮೋನೋ ಲಾರಿನ್ ಅಗಿ ಬದಲಾಗಿ ದೇಹ ಪ್ರವೇಶಿಸುವ ಬ್ಯಾಕ್ಟೀರಿಯಾ ವೈರಾಣುವನ್ನು ಕೊಲ್ಲುತ್ತದೆ. ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಆಸಿಡ್ (ಫ್ಯಾಟಿ ಆಸಿಡ್) ಎನ್ನುವ ಕೊಬ್ಬಿನಾಂಶ ಹಲವಾರು ವೈರಸ್ ಅನ್ನು ಜೀವಕೋಶದಲ್ಲಿ ಬೆಳೆಯುದನ್ನು ತಡೆಗಟ್ಟಬಲ್ಲದು ಎಂದು ಈ ಬಗ್ಗೆ ಹಲವು ಮಂದಿ ತೋರಿಸಿಕೊಟ್ಟಿದ್ದಾರೆ.
ಇಡೀ ದೇಶದಲ್ಲಿ ಉಳಿದೆಲ್ಲ ರಾಜ್ಯಗಳಿಗಿಂತ ಕೇರಳದ ಜನರು ಕೊರೊನಾ ವಿರುದ್ದ ಹೋರಾಡಲು ಶಕ್ತರಾಗಿದ್ದಾರೆ. ಹೀಗಾಗಿ ತೆಂಗಿನ ಎಣ್ಣೆ ಬಳಕೆಯಿಂದ ವೈರಾಣು ನಿಯಂತ್ರಣ ಅಥವಾ ಸೋಂಕಿತರನ್ನು ಶೀಘ್ರ ಗುಣಪಡಿಸುವಲ್ಲಿ ಸಹಾಯ ಮಾಡುತ್ತದೆ ಎಂಬುವುದರ ಬಗ್ಗೆ ವಿಶೇಷವಾದ ಪ್ರಯೋಗಗಳು ನಡೆಯಬೇಕಾಗಿದೆ ಎಂದು ಸಂಶೋಧನೆಯಲ್ಲಿ ತೊಡಗಿರುವ ಡಾ| ಶಶಾಂಕ್ ಜೋಶಿ ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here