



ಬೆಳ್ತಂಗಡಿ: ತಾಲೂಕಿನ ಭಾರತ ಕಮ್ಯುನಿಸ್ಟ್ ಪಕ್ಷ ಕೊರೊನಾ ವೈರಸ್ ತಡೆಗಟ್ಟುವಲ್ಲಿ ವಿಫಲವಾದ ಕೇಂದ್ರ ಮತ್ತು ರಾಜ್ಯ ಸರಕಾರದ ನೀತಿಯ ವಿರುದ್ಧ ಹೋರಾಟ ವಾರಾಚರಣೆ ಜೂನ್ 27 ರಿಂದ ಜುಲೈ 6 ರ ತನಕ ನಡೆಯಿತು.
ಲಾಕ್ ಡೌನ್ ನಿಂದಾಗಿ ದುಡಿಯುವ ವರ್ಗದ ಜನರ ಬದುಕು ಅತ್ಯಂತ ಹೀನಾಯ ಪರಿಸ್ಥಿತಿಗೆ ತಲುಪಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ರಾಜ್ಯ ಸರ್ಕಾರಗಳು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ವೈರಾಣು ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಉಚಿತವಾಗಿ ನೀಡಬೇಕು ಸೇರಿದಂತೆ 8 ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕೇಂದ್ರ, ರಾಜ್ಯ ಸರ್ಕಾರಕ್ಕೆ ಬೆಳ್ತಂಗಡಿ ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ಸಿಪಿಐ(ಎಂ) ತಾಲೂಕು ಸಮಿತಿ ಸದಸ್ಯ ವಸಂತ ನಡ, ಸಿಪಿಐ(ಎಂ) ತಾಲೂಕು ಸಮಿತಿ ಸದಸ್ಯ ಶೇಖರ್ ಲಾಯಿಲ, ಸಿಪಿಐ(ಎಂ)ತಾಲೂಕು ಕಾರ್ಯದರ್ಶಿ ಶಿವಕುಮಾರ್ ಎಸ್ ಎಂ, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಲಲಿತಾ ಮದ್ದಡ್ಕ, ಮುಖಂಡರಾದ ಸುಜೀತ್ ಉಜಿರೆ, ಕುಸುಮ ಮಾಚಾರು, ಕೃಷ್ಣ ನೆರಿಯ, ಮುದರ ಬಾರ್ಯ, ಸುಹಾಸ್ ಬೆಳ್ತಂಗಡಿ, ಪ್ರಶಾಂತ್ ಬೆಳ್ತಂಗಡಿ, ರೈತ ಸಂಘದ ಮುಖಂಡರಾದ ನಿಲೇಶ್ ಹೆಚ್. ಪೆರಿಂಜೆ, ಜಯನ್ ಮುಂಡಾಜೆ ವಹಿಸಿದ್ದರು.






