


ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಕೋವಿಡ್-19 ಕ್ವಾರಂಟೈನ್ ನಲ್ಲಿರುವ ನಿಯಮ ಉಲ್ಲಂಘನೆ ಮಾಡಿ ತಿರುಗಾಟ ನಡೆಸಿದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ಪ್ರಕರಣ ದಾಖಲಾಗಿದೆ.
ದ.ಕ.ಜಿಲ್ಲೆಯಲ್ಲಿ ಒಟ್ಟು ವಿವಿಧ ಠಾಣೆಯ ವ್ಯಾಪ್ತಿಯಲ್ಲಿ 51 ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಲು ಜಿಲ್ಲಾಡಳಿತ ಅಯಾಯ ಪೋಲೀಸ್ ಠಾಣೆಗಳಿಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಮೂಲಕ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಕೋವಿಡ್-19 ವಾರ್ ರೂಂ ಬೆಂಗಳೂರು ಅವರು ವಿಡಿಯೋ ಸಂವಾದದಲ್ಲಿ ನೀಡಿರುವ ನಿರ್ದೇಶನದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕ್ವಾರಂಟೈನ್ ನಲ್ಲಿರುವ ನಿಯಮ ಉಲ್ಲಂಘನೆ ಮಾಡಿ ಹೊರಗಡೆ ಹೋಗಿ ತಿರುಗಾಟ ನಡೆಸಿರುವ ಬಗ್ಗೆ ಸೆಟ್ ಲೈಟ್ ಮುಖಾಂತರ ಪ್ರಕರಣ ಪತ್ತೆ ಹಚ್ಚಿದ ಇಲಾಖೆ ಒಟ್ಟು ಜಿಲ್ಲೆಯಲ್ಲಿ 51 ಪ್ರಕರಣ ದಾಖಲಿಸಿದೆ.
ಕೋವಿಡ್ -19 ಗೆ ಸಂಬಂಧಿಸಿದಂತೆ ಕ್ವಾರಂಟೈನ್ ಗೆ ಮಾಡಲಾಗುತ್ತಿದ್ದ ವ್ಯಕ್ತಿಗಳಿಗೆ ಎಷ್ಟು ಹೇಳಿದರೂ ಅವರು ನಿಯಮ ಉಲ್ಲಂಘನೆ ಮಾಡುತ್ತಿರುವುದು ಹೆಚ್ಚು ಹೆಚ್ಚು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮತ್ತು ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಮಿತಿ ಮೀರಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಲು ಅದೇಶ ಮಾಡಿದ್ದಾರೆ.
269, 270,271 ಐಪಿಸಿ ಹಾಗೂ ಕರ್ನಾಟಕ ಎಪಿಡಮಿಕ್ ಆಕ್ಟ್ 5(1) ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಲ್ಲಿ 5 ಪ್ರಕರಣಗಳು ದಾಖಲಾದರೆ, ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ 1
ವಿಟ್ಲ ಠಾಣೆಯಲ್ಲಿ 1ಹಾಗೂ ಪುಂಜಾಲಕಟ್ಟೆ ಸೇರಿದಂತೆ ಉಳಿದ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇವರು ಇನ್ಸ್ಟಿಟ್ಯೂಟ್ ನಲ್ ಕ್ವಾರಂಟೈನ್ ಮುಗಿಸಿ ಹೋಂ ಕ್ವಾರಂಟೈನ್ ಗೆಂದು ಕಳುಹಿಸಿಕೊಟ್ಟ ವ್ಯಕ್ತಿಗಳು ಚಾಲಕೀತನ ಪ್ರದರ್ಶನ ಮಾಡಿ ಮನೆಯಿಂದ ಸುತ್ತಾಟ ನಡೆಸಿದ್ದು, ಇಲಾಖೆಗೆ ಜಿ.ಪಿ.ಆರ್.ಎಸ್.ಮೂಲಕ ತಿಳಿದು ಬಂದಿದೆ.
ಕೋವಿಡ್ -19 ನ ಅವಧಿಯಲ್ಲಿ ಹೋಂ ಕ್ವಾರಂಟೈನ್ ನಲ್ಲಿರಬೇಕಾದವರು ನಿಯಮ ಉಲ್ಲಂಘಿಸಿ ತಿರುಗಾಟ ನಡೆಸಿದ್ದರಿಂದ ಕೊರೊನಾ ಹಬ್ಬಲು ಇವರ ಕಾರಣರಾಗಬಹುದು ಎಂದು ತಿಳಿಸಲಾಗಿದೆ.
ಮುಂದಿನ ದಿನಗಳಲ್ಲಿಯೂ ಕ್ವಾರಂಟೈನ್ ಉಲ್ಲಂಘನೆ ಮಾಡಿದರೆ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮನೆಗೆ ಹೋದ ಮೇಲೆ ಖುಷಿ ಬಂದ ರೀತಿಯಲ್ಲಿ ತಿರುಗಾಟ ನಡೆಸಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಡೋಂಟ್ ಕ್ಯಾರ್ ಎಂದವರಿಗೆ ಕಾದಿದೆ ಶಿಕ್ಷೆ.






