


ಕುಕ್ಕಾಜೆ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾಗಿ ಸತೀಶ್ ಜಾರಕಿಹೋಳಿ, ಸಲೀಂ ಅಹಮದ್, ಈಶ್ವರ ಖಂಡ್ರೆಯವರು ಪ್ರತಿಜ್ಞೆ ಸ್ವೀಕರಿಸಿದರು.
ಈ ಸಂಧರ್ಭದಲ್ಲಿ ಇರಾ ವಲಯ ಕಾಂಗ್ರೆಸ್ ವತಿಯಿಂದ ಪ್ರತಿಜ್ಞಾ ದಿನ ಕಾರ್ಯಕ್ರಮವನ್ನು ಇರಾ ಮಲಯಾಳಿ ಬಿಲ್ಲವ ಸಭಾ ಭವನದಲ್ಲಿ ಜರಗಿತು. ಗ್ರಾಮದ ಹಿರಿಯ ವಾಮನ ಪೂಜಾರಿಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಪ್ರಾಸ್ತಾವಿಕ ಮಾತುಗಳನ್ನಾಡಿ, ಗ್ರಾಮೀಣ ಮಟ್ಟದಲ್ಲಿ ಪಕ್ಷವನ್ನು ಬಲಿಷ್ಠವಾಗಿ ಬೆಳೆಸಲು ಕಾರ್ಯಕರ್ತರು ಶ್ರಮಿಸಿ ದೇಶಕ್ಕಾಗಿ ಸುಭದ್ರ ತಳಹದಿಯನ್ನು ಹಾಕಿ ಕೊಟ್ಟ ಪಕ್ಷದ ತ್ಯಾಗ ಮನೋಭಾವವನ್ನು ಮುಂದಿನ ಪೀಳಿಗೆಯವರಿಗೆ ಹಿರಿಯ ಕಾರ್ಯಕರ್ತರು ತಿಳಿಸಬೇಕಾಗಿದೆ ಎಂದರು.
ಬಂಟ್ವಾಳ ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಆಲಿ. ಇಂಟಕ್ ಮುಖಂಡ ಸ್ಟೀವನ್ ಮೊಗರ್ನಾಡ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಇರಾ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಸ್ವಾಗತಿಸಿ, ತುಳಸಿ ಪಿ. ಪೂಜಾರಿ ವಂದಿಸಿದರು.





