ನವದೆಹಲಿ : ದೇಶಾದ್ಯಂತ ಲಾಕ್ ಡೌನ್ ನಿರ್ಬಂಧ ಸಡಿಲಿಸಿ ಆನ್ ಲಾಕ್ 1.0 ಘೋಷಿಸಿದ್ದ ಕೇಂದ್ರ ಸರ್ಕಾರ ಇದೀಗ ಜುಲೈ 1 ರಿಂದ ಆನ್ ಲಾಕ್ 2.0 ರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದ ಮಾರ್ಗಸೂಚಿ ಅನ್ವಯ ಶಾಲೆ, ಕಾಲೇಜುಗಳು ಜುಲೈ 31 ರವರೆಗೆ ತೆರೆಯುವಂತಿಲ್ಲ. ಆನ್ ಲೈನ್/ ದೂರ ಶಿಕ್ಷಣಕ್ಕೆ ಅನುಮತಿ ನೀಡಲಾಗಿದೆ. ಕಂಟೈನ್ಮೆಂಟ್ ವಲಯಗಳಲ್ಲಿ ಯಥಾಸ್ಥಿತಿ ಜಾರಿಯಲ್ಲಿರಲಿದ್ದು, ಅಗತ್ಯ ಚಟುವಟಿಕೆಗೆ ಮಾತ್ರ ಅನುಮತಿ ನೀಡಲಾಗಿದೆ. ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ಸಂಚಾರ ನಿಷೇಧಿಸಲಾಗಿದೆ.

ಏನಿರುತ್ತೆ?
ದೇಶಿಯ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಾಗಿದೆ. ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ಕರ್ಪ್ಯೂ ಜಾರಿ ಮಾಡಲಾಗಿದೆ. ಸ್ಥಳದ ಆಧಾರದ ಮೇಲೆ ಐದಕ್ಕಿಂತ ಹೆಚ್ಚಿನ ಜನರಿಗೆ ಅಂಗಡಿ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

ನಿಯಮಗಳನ್ನು ಪಾಲಿಸಿ ಮದುವೆ ಸಮಾರಂಭಗಳು ನಡೆಸಬಹುದಾಗಿದ್ದು, 50 ಜನ ಮೀರಬಾರದು.

ಏನಿರಲ್ಲ?
ಅಂತಾರಾಷ್ಟ್ರೀಯ ವಿಮಾನ ಯಾನ ಸಂಪೂರ್ಣ ನಿಷೇಧಿಸಲಾಗುವುದು.
ಮೆಟ್ರೋ ರೈಲು ಸಂಚಾರ ನಿ‌ಷೇಧ ಮಾಡಲಾಗಿದ್ದು, ಸ್ವಿಮ್ಮಿಂಗ್ ಪೂಲ್, ಬಾರ್ ಗಳನ್ನು ಕೂಡಾ ನಿಷೇಧಿಸಿದೆ. ಸಾಮಾಜಿಕ, ರಾಜಕೀಯ ಸಭೆ ನಿರ್ಭಂಧ ಹೇರಲಾಗಿದೆ. ಶೈಕ್ಷಣಿಕ- ಸಾಂಸ್ಕೃತಿ ಕಾರ್ಯಕ್ರಮವು ನಿಷೇಧಿಸಲಾಗಿದ್ದು, ಹೆಚ್ಚಿನ ಜನರು ಸೇರುವ ಸಮಾವೇಶ ನಡೆಸಲು ಅನುಮತಿ ಇಲ್ಲ. ಕಂಟೇನ್ಮೆಂಟ್ ವಲಯಗಳಲ್ಲಿ ಕಟ್ಟು-ನಿಟ್ಟಿನ ಕ್ರಮ ಜಾರಿಗೊಳಿಸಲಾಗುವುದು ಎಂದು ಮಾರ್ಗ ಸೂಚಿಯಲ್ಲಿ ನೀಡಲಾಗಿದೆ.

ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳು:
ಆರೋಗ್ಯ ಸೇತು ಆಪ್ ಬಳಸುವುದು ಕಡ್ಡಾಯವಾಗಿದೆ. ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಸಾರ್ವಜನಿಕ ಸ್ಕಳಗಳಲ್ಲಿ ಉಗುಳುವುದನ್ನು ನಿಷೇಧಿಸಿದೆ. ಸಾಮಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಸ್ಯಾನಿಟೈಸರ್‍ ನಿಂದ ಕೈಗಳನ್ನು ಸ್ವಚ್ಛಗೊಳಿಸುತ್ತಿರುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು ಎಂದು ಮಾರ್ಗ ಸೂಚಿಯಲ್ಲಿ ನಮೂದಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here