ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 4 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ನಿನ್ನೆ ರಾತ್ರಿ ಪ್ರಧಾನಿ ಕಚೇರಿ ಟ್ವೀಟ್‌ ಮಾಡಿದೆ. ದೇಶದೆಲ್ಲೆಡೆ ಕೊರೊನಾ ಹರಡಲು ಪ್ರಾರಂಭವಾದ ನಂತರ ಇದು ಪ್ರಧಾನಿ ಅವರ ಆರನೇ ಭಾಷಣ. ಮೊದಲ ಹಂತದ ಆನ್ ಲಾಕ್ ಇಂದು ಕೊನೆಯಾಗಲಿದ್ದು, ಮುಂದಿನ ಅನ್ ಲಾಕ್ ನ ಪರಿಸ್ಥಿತಿ ಹೇಗಿರಲಿವೆ ಎಂಬ ಬಗ್ಗೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಚೀನಾದೊಂದಿಗೆ ಉದ್ವಿಗ್ನತೆ ನಡುವೆಯೇ ಭಾರತದಲ್ಲಿ ಟಿಕ್ ಟಾಕ್, ಯುಸಿ ಬ್ರೌಸರ್ ಮತ್ತು ಇತರೆ 59 ಚೈನೀಸ್ ಅಪ್ಲಿಕೇಷನ್ ಗಳನ್ನು ಗೃಹ ಸಚಿವಾಲಯ ನಿಷೇಧಿಸಿದ್ದ ಹಿನ್ನೆಲೆಯಲ್ಲಿ ಇಂದಿನ ಪ್ರಧಾನಿ ಮೋದಿ ಭಾಷಣ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here