ಬಂಟ್ವಾಳ: ರಾಜ್ಯದಲ್ಲಿ ಇಂದು 947 ಹೊಸ ಕೋವಿಡ್ ಕೇಸ್ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 15, 242 ಕ್ಕೆ ಏರಿಕೆಯಾಗಿದೆ.
ಇಂದು ರಾಜ್ಯದಲ್ಲಿ 20 ಸೋಂಕಿತರ ಸಾವಾಗಿದ್ದು, ಒಟ್ಟು 246 ಮಂದಿ ಸೋಂಕಿಗೆ ಬಲಿಯಾದ ಬಗ್ಗೆ ವರದಿಯಾಗಿದೆ.
ಬೆಂಗಳೂರು ನಗರ 503, ಬಳ್ಳಾರಿ 61, ಹಾವೇರಿ 49, ದಕ್ಷಿಣ ಕನ್ನಡ 44, ಉತ್ತರ ಕನ್ನಡ 40, ವಿಜಯಪುರ 39, ಶಿವಮೊಗ್ಗ 22, ಬೆಂಗಳೂರು ಗ್ರಾಮಾಂತರ 21, ಬೀದರ್‌ 17, ಧಾರವಾಡ 17 ಹಾಸನ 16, ಕಲಬುರಗಿ 15, ರಾಯಚೂರು 15, ಚಿಕ್ಕಬಳ್ಳಾಪುರ 13, ದಾವಣಗೆರೆ 12, ರಾಮನಗರ 12, ಚಿಕ್ಕಮಗಳೂರು 10, ಉಡುಪಿ 9, ಮೈಸೂರು 9, ಬಾಗಲಕೋಟೆ 4, ಕೊಡಗು 4, ಕೋಲಾರ 3, ಚಿತ್ರದುರ್ಗ 3, ಯಾದಗಿರಿ 2, ಮಂಡ್ಯ 2, ಬೆಳಗಾವಿ 2, ಗದಗ 2, ತುಮಕೂರು 1 ಪ್ರಕರಣ ದೃಢಪಟ್ಟಿದೆ.
ಇಂದು ರಾಜ್ಯದಲ್ಲಿ 235 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಒಟ್ಟು 7,074 ಸಕ್ರಿಯ ಪ್ರಕರಣಗಳಿದ್ದು, 7,918 ಮಂದಿ ಬಿಡುಗಡೆಯಾಗಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here