






ಬೆಳ್ತಂಗಡಿ: ತಾಲೂಕಿನ ಮಾಲಾಡಿ ಗ್ರಾಮದ ಯುವಕನಿಗೆ ಕೊರೊನ ಸೋಂಕು ದೃಢಪಟ್ಟಿರುವ ಬಗ್ಗೆ ವರದಿಯಾಗಿದೆ.
ಮಾಲಾಡಿ ನಿವಾಸಿ 20 ವರ್ಷದ ಯುವಕನಿಗೆ ಕೊರೋನಾ ಪಾಸಿಟಿವ್.
ಮುಂಬೈ ನಿಂದ ಬಂದಿದ್ದ ಈತನನ್ನು ಜೂ.16 ರಂದು ಸೋಣಂದೂರು ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ನಂತರ ಜೂ.23 ಕ್ಕೆ ಸರಕಾರಿ ಕ್ವಾರಂಟೈನ್ ಮುಗಿಸಿ ಸೋಣಂದೂರು ಗ್ರಾಮದ ಕೋಡಿ ಎಂಬಲ್ಲಿ ಖಾಲಿ ಮನೆಯಲ್ಲಿ ಹೋಂ ಕ್ವಾರಂಟೈನ್ ನಲ್ಲಿದ್ದರು. ಕ್ವಾರಂಟೈನ್ ನಲ್ಲಿದ್ದ ಇಬ್ಬರಲ್ಲಿ ಒಬ್ಬರಿಗೆ ಸೋಂಕು ದೃಢ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.





