


ಬಂಟ್ವಾಳ: ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯ 4 ನೇ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡಿನ ಶ್ರೀ ಅನ್ನಪುಇರ್ಣೇಶ್ವರಿ ನಾಗದೇವರ ದೇವಸ್ಥಾನದ ಸಭಾಂಗಣದಲ್ಲಿ ಸಂಚಾಲಕ ಬಿ.ಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಂಡನೆಯಾದ ವಿವಿಧ ಚಟುವಟಿಕೆ,ವರದಿ,ಲೆಕ್ಕಪತ್ರದ ಬಗ್ಗೆ ಸಮಿತಿಯ ಪ್ತಮುಖರಾದ ವಕೀಲ ಚಂದ್ರಶೇಖರ ಪೂಜಾರಿ,ಲೋಕೇಶ್ ಸುವರ್ಣ,ಪ್ರಕಾಶ್ ಶೆಟ್ಟಿ ಬಿ.ತುಂಬೆ,ಸುರೇಶ್ ಕುಮಾರ್,ರಾಮಣ್ಣ ವಿಟ್ಲ,ಬಾಬು ಭಂಡಾರಿ, ರಾಜಾ ಚಂಡ್ತಿಮಾರ್,ಸುರೇಂದ್ರ ಕೋಟ್ಯಾನ್,ಹಾರುನ್ ರಶೀದ್, ಉದಯಕುಮಾರ್ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.
ಇನ್ನೊರ್ವ ಸಂಚಾಲಕ ಬಿ.ಎಂ.ಪ್ರಭಾಕರ ದೈವಗಡ್ಡೆ ಅವರು ಸ್ವಾಗತಿಸಿ,ಪ್ರಸ್ತಾವನೆಗೈದು. ಸಮಿತಿಯು ಕಳೆದ 4 ವರ್ಷಗಳಲ್ಲಿ ಜನರ ಹಲವು ಸಮಸ್ಯೆಗಳ ಬಗ್ಗೆ ಹೋರಾಟದ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿದೆ.ಮುಂದಿನ ದಿನಗಳಲ್ಲು ಜನರ ಮೂಲಭೂತ ಸೌಕರ್ಯದ ಬೇಡಿಕೆಯನ್ನು ಮುಂದಿಟ್ಟು ಪ್ರಜಾಸತ್ತಾತ್ಮಕವಾಗಿ ಹೋರಾಡುವುದು ಸಮಿತಿಯ ಗುರಿಯಾಗಿದ್ದು,ಈ ನಿಟ್ಟಿನಲ್ಲಿ ಒಂದೇ ಮನಸ್ಸಿನಿಂದ ಮುನ್ನಡೆಯಬೇಕಾಗಿದೆ ಎಂದರು. ಇದೇ ವೇಳೆ ಮುಂದಿನ ಒಂದು ವರ್ಷದ ಅವಧಿಗೆ ನೂತನ ಸಮಿತಿ ರಚಿಸಲಾಯಿತು. ಪದಾಧಿಕಾರಿಗಳು: ನೂತನ ಅಧ್ಯಕ್ಷರಾಗಿ ಬಿ.ಎಂ.ಪ್ರಭಾಕರ ದೈವಗುಡ್ಡೆ ಆಯ್ಕೆಯಾದರು.ಉಳಿದಂತೆ ಪ್ರಕಾಶ್ ಶೆಟ್ಟಿ ಬಿ.ತುಂಬೆ,ಹಾರುನ್ ರಶೀದ್,ಲೋಕೇಶ್ ಸುವರ್ಣ(ಉಪಾಧ್ಯಕ್ಷರು), ಬಿ.ಶೇಖರ್(ಪ್ರಧಾನ ಕಾರ್ಯದರ್ಶಿ),ರಾಮಣತಣ ವಿಟ್ಲ,ಸುರೇಶ್ ಕುಮಾರ್,ಶರ್ಮಿಳಾ( ಜತೆ ಕಾರ್ಯದರ್ಶಿಗಳು),ಸುರೇಂದ್ರಕೋಟ್ಯಾ





