






ಬೆಳ್ತಂಗಡಿ: ತಾಲೂಕಿನಲ್ಲಿ ಮಡಂತ್ಯಾರ್ ನಲ್ಲಿ ಕೊರೊನಾ ಕೇಸ್ ಪತ್ತೆ. ಮಡಂತ್ಯಾರ್ ನಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದ 30 ವರ್ಷದ ಯುವಕನಿಗೆ ಕೋರಾನಾ ದೃಢ ಪಟ್ಟಿದೆ. ಮಡಂತ್ಯಾರು ಕಾನ್ವೆಂಟ್ ರೋಡ್ ನ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು, ಬಿ.ಸಿ.ರೋಡ್ ನಿವಾಸಿ ಎಂದು ತಿಳಿದುಬಂದಿದೆ.
ಈತ ಒಂದುವರೆ ತಿಂಗಳ ಹಿಂದೆಯಷ್ಟೇ ಗಲ್ಫ್ ನಿಂದ ಬಂದಿದ್ದ ಎಂಬ ಮಾಹಿತಿ ಇದೆ. ಈತನನ್ನು ಅನಾರೋಗ್ಯದ ಹಿನ್ನೆಲೆ ಮಂಗಳೂರಿನ ಖಾಸಗಿ ಆಸ್ಪತ್ರಗೆ ದಾಖಲಿಸಿದೆ. ಈತ ದಕ್ಕೆಗೆ ಹೋಗಿ ಬಂದಿರುವ ಶಂಕೆ ಇದೆ. ಈತ ಮಂಡಂತ್ಯಾರಿನಲ್ಲಿದ್ದ ಮನೆ ಸೀಲ್ ಡೌನ್ ಮಾಡಲಾಗಿದೆ.





