ಬಂಟ್ವಾಳ: ಮಂಗಳೂರಿನಲ್ಲಿ ಕೊರೋನಾಗೆ ಮತ್ತೆ ಇಬ್ಬರು ಬಲಿ. ಬಂಟ್ವಾಳ ಮೂಲದ ವೃದ್ದೆ ಮತ್ತು ಸುರತ್ಕಲ್ ಮೂಲದ ಯುವಕ ಸಾವು.

ಬಂಟ್ವಾಳದ 57 ವರ್ಷದ ವೃದ್ದೆ ಹಾಗೂ ಸುರತ್ಕಲ್ ನ ಇಡ್ಯಾ ನಿವಾಸಿ 31 ವರ್ಷದ ಯುವಕ ಕೊರೋನಾಗೆ ಬಲಿ.

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೃದ್ದೆ ಸಾವು, ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಯುವಕ ಸಾವು.

ಕೋರೋನ ಪೋಸಿಟಿವ್ ಗೆ ತುತ್ತಾಗಿದ್ದ ಬಂಟ್ವಾಳ ತಾಲೂಕಿನ ನಿವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇದೀಗ ಬಂಟ್ವಾಳದಲ್ಲಿ ಆತಂಕ ಹೆಚ್ಚಾಗಿದೆ ಕಳೆದ ಒಂದು ತಿಂಗಳಿನಿಂದ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಇದರಿಂದ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಈತನ್ಮಧ್ಯೆ ಶನಿವಾರ ತಾಲೂಕಿನ ಮೂರು ಗ್ರಾಮಗಳಲ್ಲಿ ತಲಾ ಒಂದರಂತೆ ಮೂರು ಕೊರನೋ ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಇದೀಗ ಶನಿವಾರ ಪತ್ತೆಯಾಗಿರುವ ಲೊರೊಟ್ಟೋ ಪ್ರಕರಣದಲ್ಲಿ ಟಿಪ್ಪು ನಗರ ನಿವಾಸಿ 57 ವರ್ಷದ ಮಹಿಳೆ ತಡರಾತ್ರಿ ಸಾವಿಗೀಡಾಗಿರುವುದು ತಾಲೂಕನ್ನು ಆತಂಕಕ್ಕೆ ತಳ್ಳಿದೆ. ಇದರೊಂದಿಗೆ ತಾಲೂಕಿನಲ್ಲಿ ಬಲಿಯಾದವರ ಸಂಖ್ಯೆ ನಾಲ್ಕಕ್ಕೇರಿದೆ. ಮೃತಮಹಿಳೆ ಮಧುಮೇಹ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅನಾರೋಗ್ಯಕ್ಕೆ ತುತ್ತಾಗಿದ್ದರು. ಇದೀಗ ಕೊರೋನಾ ಅವರನ್ನು ಬಲಿತೆಗೆದುಕೊಂಡಿದೆ. ಮೃತರ ಅಂತ್ಯಸಂಸ್ಕಾರಕ್ಕೆ ತಾಲೂಕು ಆಡಳಿತ ಸಿದ್ಧತೆ ನಡೆಸುತ್ತಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here