ಬಂಟ್ವಾಳ : ತಾಲೂಕಿನಲ್ಲಿ ಅವಧಿ ಪೂರ್ಣಗೊಳ್ಳಲಿರುವ 57 ಗ್ರಾಮ ಪಂಚಾಯತ್ ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಓರ್ವ ಅಧಿಕಾರಿಗೆ 2 ರಿಂದ ನಾಲ್ಕು ಪಂಚಾಯತ್ ನ ಜವಬ್ದಾರಿ ನೀಡಲಾಗಿದ್ದು, ಸೋಮವಾರದಿಂದ ಗ್ರಾಮಪಂಚಾಯತ್ ಗಳಲ್ಲೂ ಅಧಿಕಾರಿಗಳ ಖದರ್ ಕಾಣಸಿಗಲಿದೆ.
ಸಂಗಬೆಟ್ಟು, ಕುಕ್ಕಿಪ್ಪಾಡಿ, ಚೆನ್ನೈತ್ತೋಡಿ ಪಂಚಾಯತ್ ಗಳಿಗೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ‌ ನಿರ್ದೇಶಕ ಪ್ರದೀಪ್ ಡಿ’ಸೋಜ, ಪಿಲಾತಬೆಟ್ಟು, ಇರ್ವತ್ತೂರು, ಕಾವಳ ಪಡೂರು ಗ್ರಾಮಪಂಚಾಯತ್ ಗಳಿಗೆ ಮೆಸ್ಕಾಂ ಅಧಿಕಾರಿ ನಾರಾಯಣ ಭಟ್, ಕಾವಳ ಮೂಡೂರು, ಉಳಿ, ಬಡಗಕಜೆಕಾರು ಪಂಚಾಯತ್ ಗಳಿಗೆ ಮೆಸ್ಕಾಂ ಅಧಿಕಾರಿ ಪ್ರಶಾಂತ್ ಪೈ, ಸರಪಾಡಿ, ಮಣಿನಾಲ್ಕೂರು,ನಾವೂರು ಪಂಚಾಯತ್ ಗಳಿಗೆ ಪುಷ್ಪರಾಜ್ ಪೂಜಾರಿ, ಪಂಜಿಕಲ್ಲು, ಅಮ್ಟಾಡಿ, ರಾಯಿ ಪಂಚಾಯತ್ ಗಳಿಗೆ ತೋಟಗಾರಿಕೆ ಇಲಾಖೆಯ ದಿನೇಶ್, ಅರಳ, ಬಡಗಬೆಳ್ಳೂರು, ಕರಿಯಂಗಳ ಪಂಚಾಯತ್ ಗಳಿಗೆ ತಾರನಾಥ ಸಾಲಿಯಾನ್, ಅಮ್ಮುಂಜೆ , ಮೇರಮಜಲು, ತುಂಬೆ ಗ್ರಾಮಪಂಚಾಯತ್ ಗಳಿಗೆ ಲೋಕೋಪಯೋಗಿ ಇಲಾಖೆಯ ಅಮೃತ್ ಕುಮಾರ್ ಸಿ.ಆರ್, ಕಳ್ಳಿಗೆ,ನರಿಕೊಂಬು, ಬಾಳ್ತಿಲ ಪಂಚಾಯತ್ ಗಳಿಗೆ ಕೃಷಿ ಅಧಿಕಾರಿ ನಾರಾಯಣ ಶೆಟ್ಟಿ, ಕಡೇಶ್ವಾಲ್ಯ, ಬರಿಮಾರು, ಗೋಳ್ತಮಜಲು ಗ್ರಾಮಪಂಚಾಯತ್ ಗಳಿಗೆ ಸಿಡಿಪಿಓ ಗಾಯತ್ರಿ ಆರ್.ಕಂಬಳಿ, ಸಜಿಪಮುನ್ನೂರು, ಸಜಿಪಮೂಡ, ಸಜಿಪನಡು ಗ್ರಾಮಪಂಚಾಯತ್ ಗಳಿಗೆ ಸಹಾಯಕ ಇಂಜಿನಿಯರ್ ಷಣ್ಮುಗಂ, ಕುರ್ನಾಡು, ಸಜಿಪಪಡು,ಪಜೀರು ಗ್ರಾಮಪಂಚಾಯತ್ ಗಳಿಗೆ ಲೋಕೋಪಯೋಗಿ‌ ಇಲಾಖೆಯ ರವೀಂದ್ರನಾಥ ಶೆಟ್ಟಿ, ಬಾಳೆಪುಣಿ , ನರಿಂಗಾನ ಗ್ರಾಮಪಂಚಾಯತ್ ಗೆ ಅಕ್ಷರ ದಾಸೋಹದ ಅಧಿಕಾರಿ ‌ನೋಣಯ್ಯ, ಮಂಚಿ, ಇರಾ ಗ್ರಾಮಪಂಚಾಯತ್ ಗೆ ಜಾನುವಾರು ಅಭಿವೃದ್ದಿ ಅಧಿಕಾರಿ ಕೃಷ್ಣ ಮೂರ್ತಿ, ವೀರಕಂಭ, ಬೋಳಂತೂರು ಗ್ರಾಮಚಾಯತ್ ಗಳಿಗೆ ಲೋಕೋಪಯೋಗಿ ಇಲಾಖೆಯ ಪ್ರೀತಂ ಎನ್, ಮಾಣಿ,ಪೆರಾಜೆ,ನೆಟ್ಲಮುಡ್ನೂರು ಗ್ರಾಮಪಂಚಾಯತ್ ಗಳಿಗೆ ಕೃಷಿ ಅಧಿಕಾರಿ ನಂದನ್ ಶೆಣೈ, ಅನಂತಾಡಿ, ಕೆದಿಲ, ಪೆರ್ನೆ ಗ್ರಾಮಪಂಚಾಯತ್ ಗಳಿಗೆ ಮೆಸ್ಕಾಂ ಅಧಿಕಾರಿ ಪ್ರವೀಣ್ ಜೋಷಿ, ಇಡ್ಕಿದು, ವಿಟ್ಲಮುಡ್ನೂರು, ವಿಟ್ಲ ಪಡ್ನೂರು, ಕೊಳ್ನಾಡು ಗ್ರಾಮಪಂಚಾಯತ್ ಗಳಿಗೆ ಪಂಚಾಯತ್ ರಾಜ್ ಇಂಜಿನಿಯರ್ ಕುಶಕುಮಾರ್, ಕರೋಪಾಡಿ, ಸಾಲೆತ್ತೂರು, ಕನ್ಯಾನ ಗ್ರಾಮಪಂಚಾಯತ್ ಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಮಾಣಿಲ ಪೆರುವಾಯಿ, ಅಳಿಕೆ ಗ್ರಾಮಪಂಚಾಯತ್ ಗಳಿಗೆ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಹಾಗೂ ಕೇಪು, ಪುಣಚ ಗ್ರಾಮಪಂಚಾಯತ್ ಗಳಿಗೆ ವಿಟ್ಲ ಸಿಡಿಪಿಒ ಸುಧಾ ಜೋಷಿಯವರನ್ನು ಆಡಳಿತಾಧಿಕಾರಿಗಳೆ‌ಂದು ಘೋಷಿಸಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here