



ಬಂಟ್ವಾಳ: ರಾಜ್ಯದಲ್ಲಿ ಇಂದು 918 ಹೊಸ ಕೊರೊನ ಕೇಸ್ ಪತ್ತೆಯಾಗಿದೆ. ಆ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,923 ಕ್ಕೆ ಏರಿಕೆಯಾಗಿದೆ. ಇಂದು ರಾಜ್ಯದಲ್ಲಿ 11 ಸೋಂಕಿತರು ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆ 191 ಕ್ಕೆ ಏರಿದೆ.
ಬೆಂಗಳೂರು ನಗರ 596, ದ. ಕ. 49, ಕಲಬುರಗಿ 33, ಬಳ್ಳಾರಿ, ಗದಗ ತಲಾ 24, ಧಾರವಾಡ 19, ಬೀದರ್ 17, ಉಡುಪಿ, ಹಾಸನ, ಕೋಲಾರ ತಲಾ 14, ಯಾದಗಿರಿ, ಶಿವಮೊಗ್ಗ, ತುಮಕೂರು, ಚಾಮರಾಜನಗರ 13, ಮಂಡ್ಯ, ಮೈಸೂರು ತಲಾ 12, ಕೊಡಗು 9, ರಾಯಚೂರು, ದಾವಣಗೆರೆ ತಲಾ 6, ಬೆಂಗಳೂರು ಗ್ರಾಮಾಂತರ 5,
ಚಿಕ್ಕಮಗಳೂರು, ಚಿತ್ರದುರ್ಗ, ಉ.ಕ. ಬಾಗಲಕೋಟೆ ತಲಾ 2, ಬೆಳಗಾವಿ, ಚಿಕ್ಕಬಳ್ಳಾಪುರ, ಹಾವೇರಿ ತಲಾ 1 ಕೇಸ್ ಪತ್ತೆಯಾದ ಬಗ್ಗೆ ವರದಿಯಾಗಿದೆ.
ರಾಜ್ಯದಲ್ಲಿ ಇಂದು 371 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.





