Thursday, October 26, 2023

ಬೆಳ್ತಂಗಡಿ: ಉಜಿರೆ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಕೊರೋನಾ ದೃಢ

Must read

ಬೆಳ್ತಂಗಡಿ: ತಾಲೂಕಿನ ಉಜಿರೆ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಕೊರೊನ ಕೇಸ್ ದೃಢಪಟ್ಟಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ. ಮುಂಡಾಜೆ ನಿವಾಸಿಯಾದ ಇವರು ಉಜಿರೆ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುತ್ತಿದ್ದರು.
ಸರಕಾರದ ಆದೇಶದಂತೆ ಪೆಟ್ರೋಲ್ ಪಂಪ್, ಆಸ್ಪತ್ರೆ ಸಿಬಂದಿ, ಮೆಡಿಕಲ್ ಸ್ಟೋರ್ ಸೇರಿದಂತೆ ಒಟ್ಟು 52 ಮಂದಿಯ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ ಈಕೆಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಆಕೆ ಕೆಲಸ ಮಾಡುತ್ತಿದ್ದ ಪೆಟ್ರೋಲ್ ಬಂಕ್ ಅನ್ನು ಸೀಲ್ ಡೌನ್ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ. ಈಗಾಗಲೇ ಪೆಟ್ರೋಲ್ ಬಂಕ್ ಗೆ ಬಂದ ಗ್ರಾಹಕರಿಗೆಲ್ಲಾ ಈಗ ಆತಂಕ ಶುರುವಾಗಿದೆ.

More articles

Latest article