ಬಂಟ್ವಾಳ: ಉಪ್ಪಡ್ ಪಚ್ಚಿಲ್ ಆರಂಭಿಸಿದವಳು ತಾಯಿ. ಆಕೆಯೇ ಮೊದಲ ವಿಜ್ಞಾನಿ. ಹಲಸಿನ ಹಣ್ಣಿನಲ್ಲಿ ಅಪಾರ ಪ್ರೋಟಿನ್ ಅಂಶಗಳಿವೆ. ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಕಾರ್ಯಕ್ರಮ ಉದ್ಘಾಟಿಸಿ ಇದರ ಮಹತ್ವವನ್ನು ತಿಳಿಸಿದರು.
ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಉಪ್ಪಡ್ ಪಚ್ಚಿಲ್ ಆಯನೊ ಎಂಬ ತುಳುವ ಕಾರ್ಯಕ್ರಮವನ್ನು ಹಲಸಿನ ಕಾಯಿ ತುಂಡರಿಸುವ ಮೂಲಕ ಉದ್ಘಾಟಿಸಿ, ನಮ್ಮ ಆಹಾರ ಸಂಸ್ಕೃತಿಯನ್ನು ಉಳಿಸಲು ಇಂಥ ಕಾರ್ಯಕ್ರಮಗಳು ನಡೆಯಬೇಕು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಉಪಾಧ್ಯಕ್ಷ ನಾರಾಯಣ ಗೌಡ, ಆಡಳಿತ ಮಂಡಳಿ ಸದಸ್ಯ ಆರ್. ಚೆನ್ನಪ್ಪ ಕೊಟ್ಯಾನ್, ಹೊಯ್ಸಳ ರಾಷ್ಟ್ರ ಸೇವಿಕಾ ಸಮಿತಿಯ ಪ್ರಾಂತ ಕಾರ್‍ಯಕಾರಿಣಿ ಸದಸ್ಯೆ ಕಮಲ ಪ್ರಭಾಕರ್ ಭಟ್, ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಜಯರಾಮ ಹಾಗೂ ಪದ್ಮನಾಭ, ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯೆಯರಾದ ಲಕ್ಷ್ಮೀ ರಘುರಾಜ್ ಹಾಗೂ ಮಲ್ಲಿಕಾ ಶೆಟ್ಟಿ, ಶ್ರೀರಾಮ ವಿದ್ಯಾಕೇಂದ್ರದ ಕೋಶಧಿಕಾರಿ ಶಿವಗಿರಿ ಸತೀಶ ಭಟ್, ಮುಖ್ಯ ಶಿಕ್ಷಕ ರವಿರಾಜ್ ಕಣಂತೂರು ಮತ್ತು ಮಾತೃ ಭಾರತಿಯ ಪದಾಧಿಕಾರಿಗಳಾದ ಸೌಮ್ಯ, ಬೇಬಿ, ರಾಜಶ್ರೀ ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here