ಕಲ್ಲಡ್ಕ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಅಧ್ಯಾಪಕರು ಯೋಗ ಪ್ರದರ್ಶನ ಮಾಡಿದರು.

ಯೋಗವು ನಿಮ್ಮ ದೈಹಿಕ ಆರೋಗ್ಯ, ನಿಮ್ಮ ಮಾನಸಿಕ ಆರೋಗ್ಯ ನಿಮ್ಮ ಆಧ್ಯಾತ್ಮಿಕ ಸಾಧ್ಯತೆ ಎಲ್ಲವೂ ನಿಮ್ಮೊಳಗೆ ಎಷ್ಟು ಸೌರಶಕ್ತಿಯಿದೆ ಎಂಬುದರ ಮೇಲೆ ನಿರ್ಧರಿತವಾಗಿದೆ. ಯೋಗವು ಹಲವಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಇಡೀ ವಿಶ್ವಕ್ಕೆ ಯೋಗವು ಭಾರತದ ಕೊಡುಗೆಯಾಗಿದೆ ಎಂದು ಶ್ರೀರಾಮ ವಿದ್ಯಾಭಾರತಿಯ ಕ್ಷೇತ್ರೀಯ ಸಹಸಂಘಟನ ಕಾರ್ಯದರ್ಶಿ ಜಿ.ಆರ್. ಜಗದೀಶ್‌ರವರು ಪತಂಜಲಿಯವರ ಸಾಧನೆಯನ್ನು ವಿವರಿಸುತ್ತಾ ಯೋಗದ ಮಹತ್ವವನ್ನು ತಿಳಿಸಿದರು.


ಶ್ರೀರಾಮ ವಿದ್ಯಾಕೇಂದ್ರದ ಯೋಗ ತರಬೇತುದಾರ ಸಂಜಯ್‌ರವರ ಮಾರ್ಗದರ್ಶನದೊಂದಿಗೆ ಅಧ್ಯಾಪಕರಿಂದ ಯೋಗ ಪ್ರದರ್ಶನ ನಡೆಯಿತು.
ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ, ವಿದ್ಯಾಭಾರತೀಯ ಕರ್ನಾಟಕ ಪ್ರಾಂತ ಕಾರ್ಯದರ್ಶಿ ವಸಂತ ಮಾಧವ, ಶಾಲಾಭಿವೃಧ್ದಿ ಸಮಿತಿಯ ಸದಸ್ಯ ಪದ್ಮನಾಭ ಪಿ.ಕೆ. ಹಾಗೂ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here