


ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ 16 ಪರೀಕ್ಷಾ ಕೇಂದ್ರಗಳು ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆಗೆ ತಯಾರಾಗಿದೆ. ತಾಲೂಕಿನಲ್ಲಿ ಒಟ್ಟು 16 ಪರೀಕ್ಷಾ ಕೇಂದ್ರಗಳಿದ್ದು 3849 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ.
ಸ.ಪ್ರೌ.ಶಾಲೆ ಕೊಕ್ಕಡದಲ್ಲಿ 172, ಶ್ರೀ ಮಂಜುನಾಥೇಶ್ವರ ಪ್ರೌಢ ಶಾಲೆ ಧರ್ಮಸ್ಥಳ 239, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳ (ಹೆಚ್ಚುವರಿ ಬ್ಲಾಕ್ ಪರೀಕ್ಷಾ ಕೇಂದ್ರ), ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಉಜಿರೆ 322, ಎಸ್.ಡಿ.ಎಂ ಸೆಕೆಂಡರಿ ಶಾಲೆ ಉಜಿರೆ 301, ಮುಂಡಾಜೆ ಪ್ರೌಢ ಶಾಲೆ ಮುಂಡಾಜೆ 351, ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆ ಲಾಯಿಲ(ಕಾದಿರಿಸಲಾದ ಪರೀಕ್ಷಾ ಕೇಂದ್ರ), ಎಸ್.ಡಿ.ಎಂ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬೆಳ್ತಂಗಡಿ ( ಕಾದಿರಿಸಲಾದ ಪರೀಕ್ಷಾ ಕೇಂದ್ರ), ಸಂತ ತೆರೇಸಾ ಪ್ರೌಢ ಶಾಲೆ ಬೆಳ್ತಂಗಡಿ 258, ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬೆಳ್ತಂಗಡಿ 607, ಸ.ಪ್ರೌ.ಶಾಲೆ ಅಳದಂಗಡಿ 340, ಸ.ಪ್ರೌ.ಶಾಲೆ ವೇಣೂರು 432, ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ 249, ಸೇಕ್ರೆಡ್ ಹಾರ್ಟ್ ಪ.ಪೂ.ಕಾಲೇಜು (ಪ್ರೌ.ಶಾ.ವಿ)ಮಡಂತ್ಯಾರು 274, ಸ.ಪ್ರೌ.ಶಾಲೆ ಕರಾಯ 181, ಸ.ಪ್ರೌ.ಶಾಲೆ ಪದ್ಮುಂಜ 123, ಒಟ್ಟು 3849 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲ್ಲಿದ್ದು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಸರಕಾರ ಕೈಗೊಂಡಿದೆ.





