


ಬಂಟ್ವಾಳ: ಶ್ರೀ.ಕ್ಷೇ.ಧ.ಗ್ರಾ. ಯೋಜನೆ ಬಿ.ಸಿ. ಟ್ರಸ್ಟ್ ಪಾಣೆಮಂಗಳೂರು ವಲಯದ ಸಜಿಪಮೂಡ ಕಾರ್ಯಕ್ಷೇತ್ರದ ಶ್ರೀ ನಾರಾಯಣ ಗುರುಮಂದಿರದಲ್ಲಿ ಪರಿಸರ ಜಾಗೃತಿ ಮತ್ತು ಸಸಿವಿತರಣಾ ಕಾರ್ಯಕ್ರಮ ನಡೆಸಲಾಯಿತು.
ಬಂಟ್ವಾಳ ತಾಲೂಕಿನ ಯೋಜನಾದಿಕಾರಿ ಜಯಾನಂದ್ಪಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅದ್ಯಕ್ಷ ಚಂದ್ರಹಾಸ ಅವರು ವಹಿಸಿದರು.
ಪ್ರತೀ ವರ್ಷ ತಾಲೂಕಿನಲ್ಲಿ 10 ಸಾವಿರ ಗಿಡಗಳನ್ನು ನಾಟಿ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಉಚಿತವಾಗಿ ಗಿಡಗಳನ್ನು ವಿತರಿಸಲಾಗುವುದು ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿ ಬಿಸಿರೋಡು ವಲಯದ ಜನಜಾಗೃತಿ ವಲಯಾದ್ಯಕ್ಷ ರೊನಾಲ್ಡ್ ಡಿ ಸೋಜ ಅವರು ಪರಿಸರ ಸಂರಕ್ಷಣೆ ಹಾಗು ಪರಿಸರ ಮಾಲಿನ್ಯದ ಕುರಿತು ಜಾಗೃತಿ ಮೂಡಿಸಿದರು. ಕಾರ್ಯಕ್ರಮವನ್ನು ಮೇಲ್ವಿಚಾರಕಿ ಅಮಿತಾ ಕಾರ್ಯಕ್ರಮ ನಿರೂಪಿಸಿದರು. ಜ್ಞಾನವಿಕಾಸ ಸಮನ್ವಯಾದಿಕಾರಿ ಸ್ವಪ್ನ ಸ್ವಾಗತಿಸಿ, ಸೇವಾಪ್ರತಿ ನಿಧಿಕುಸುಮ ವಂದಿಸಿದರು.





