






ವಿಟ್ಲ: ಅನಾರೋಗ್ಯದಿಂದ ಎಸ್ಎಸ್ಎಲ್ಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ವಿಟ್ಲ ಪಡ್ನೂರು ಗ್ರಾಮ ಕೋಡಪದವು ಮಾಳ ಎಂಬಲ್ಲಿ ನಡೆದಿದೆ.
ಕೋಡಪದವು ಮಾಳ ನಿವಾಸಿ ನಾರಾಯಣ ಅವರ ಪುತ್ರ ಭುವನೇಶ್ ಪ್ರಾಯ 16 ವರ್ಷ ಮೃತಪಟ್ಟ ಬಾಲಕ. ಈತ ವಿಟ್ಲದ ವಿಠಲ ಪ್ರೌಢ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯಾಗಿದ್ದಾನೆ.
ಭುವನೇಶ್ ಸುಮಾರು 6 ತಿಂಗಳ ಹಿಂದಿನಿಂದ ಫಿಟ್ಸ್ ಖಾಯಿಲೆಯಿಂದ ಬಳಲುತ್ತಿದ್ದ
ಮನೆಯಲ್ಲಿ ಫಿಟ್ಸ್ ಬಂದು ಬಿದ್ದು ನರಳುತ್ತಿದ್ದು, ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿದ್ದಾನೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





