


ಬಂಟ್ವಾಳ: ಬಂಟ್ವಾಳ ತಾಲೂಕು ವಾಮದಪದವು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕೆಎಂಎಫ್ ಸಹಕಾರದಲ್ಲಿ ಹೈನುಗಾರರಿಗೆ ಅನುಕೂಲಕರವಾದ ಮೈ ಎಪಿಸಿಎಸ್ ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಕಾರ್ಯಕ್ರಮ ಶನಿವಾರ ಜರಗಿತು.
ಬಂಟ್ಟಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಆ್ಯಪ್ ಬಿಡುಗಡೆಗೊಳಿಸಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಎದುರಿಸಲು ಉತ್ಪನ್ನಗಳ ಗುಣ ಮಟ್ಟ ಕಾಯ್ದುಕೊಳ್ಳುವ ಆವಶ್ಯಕತೆ ಇದೆ. ಇಂತಹ ಡಿಜಿಟಲೀಕರಣದ ಮೂಲಕ ಆಧುನಿಕ ಸೌಲಭ್ಯ ಬಳಸಿ ಸ್ಪರ್„ಸಲು ಸಹಕಾರಿಯಾಗಿದೆ. ಸ್ವದೇಶೀ ಜಾಗೃತಿಯ ಸಂದÀರ್ಭದಲ್ಲಿ ಯುವಕರು ಆ್ಯಪ್ ತಯಾರಿಸಿರುವುದು ಅಭಿನಂದಾರ್ಹ ಎಂದ ಅವರು ಆ್ಯಪ್ ತಯಾರಿಸಿದ ಭಟ್ ಇಂಡಿಯಾ ಸಂಸ್ಥೆಯ ಶ್ರೀನಿ„ ಕಲ್ಲಡ್ಕ ಅವರನ್ನು ಸಮ್ಮಾನಿಸಿದರು. ಶ್ರೀ ನಿ„ ಅವರು ಆ್ಯಪ್ ಬಳಕೆಯ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಂಘದ ವತಿಯಿಂದ ಶಾಸಕರನ್ನು ಸಮ್ಮಾನಿಸಲಾಯಿತು. ಸಂಗಬೆಟ್ಟು ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ದ.ಕ., ಉಡುಪಿ ಜಿಲ್ಲಾ ಹಾಪ್ಕಾಮ್ಸ್ ಅಧ್ಯಕ್ಷ ಕೆ.ಲಕ್ಷ್ಮೀ ನಾರಾಯಣ ಉಡುಪ, ಬಂಟ್ಟಾಳ ಬಿಜೆಪಿ ಕ್ಷೇತ್ರ ಸಮಿತಿಯ ಅಧ್ಯಕ್ಷ ದೇವಪ್ಪ ಪೂಜಾರಿ, ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಚೌಟ, ಪ್ರಮುಖರಾದ ಪುರುಷೋತ್ತಮ ಶೆಟ್ಟಿ, ಪ್ರಭಾಕರ ಶೆಟ್ಟಿ, ಸಂಘದ ಉಪಾಧ್ಯಕ್ಷ ಅನಂತರಾಮ ನಾಯಕ್, ನಿರ್ದೇಶಕರಾದ ದಿನೇಶ್ ಸಾಲ್ಯಾನ್, ಪ್ರಕಾಶ್ ಶೆಟ್ಟಿ, ಧರ್ಣಪ್ಪ ನಾಯ್ಕ, ವಿಶ್ವನಾಥ ಶೆಟ್ಟಿ, ಲೀಲಾವತಿ ರೈ, ಆನಂದಿ ಪೂಜಾರಿ, ಬೇಬಿ ಗೌಡ, ಕಾರ್ಯ ನಿರ್ವಹಣಾ„ಕಾರಿ ನಾರಾಯಣ ಶೆಟ್ಟಿ, ಲೆಕ್ಕಿಗ ಗುರುಪ್ರಸಾದ್, ಸಿಬಂದಿಗಳಾದ ಯಶೋಧರ ಮತ್ತಿತರು ಉಪಸ್ಥಿತರಿದ್ದರು.





