ಬಂಟ್ವಾಳ: ಸಿದ್ಧಕಟ್ಟೆ ವಲಯದ ಸಮೃದ್ಧಿ ಮತ್ತು ಸನ್ನಿಧಿ ಜ್ಞಾನವಿಕಾಸ ಕೇಂದ್ರಗಳ ತಿಂಗಳ ಮಾಹಿತಿ ಕಾರ್ಯಕ್ರಮ ಕರ್ಪೆ ಭಜನಾ ಮಂದಿರದಲ್ಲಿ ಜರಗಿತು. ಆಶಾ ಕಾರ್ಯಕರ್ತೆ ಭಾನುಮತಿ ಅವರು ಕೇಂದ್ರದ ಸದಸ್ಯರಿಗೆ ಕೋವಿಡ್ – 19 ಸೋಂಕು ತಡೆಗಟ್ಟುವ ಮುಂಜಾಗೃತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಸುಝುಕಿ ಶಕ್ತಿ ಸೇಲ್ಸ್ ಮಾಲಕ ಕರ್ಪೆ ಬಾವ ಗುತ್ತು ಮನೆ ಶ್ರೀಕಾಂತ್ ಅವರು ಕೇಂದ್ರದ ಸದಸ್ಯರಿಗೆ ಮಾಸ್ಕ್ ವಿತರಿಸಿದರು.

ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಸಪ್ನಾ, ಸಿದ್ಧಕಟ್ಟೆ ವಲಯ ಮೇಲ್ವಿಚಾರಕಿ ಹರಿಣಾಕ್ಷಿ ರೈ ಮತ್ತು ಸ್ಥಳೀಯ ಸೇವಾಪ್ರತಿನಿಧಿ ಸರೋಜಾ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here