ಪುತ್ತೂರು: ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಪುತ್ತೂರು ತಾಲೂಕು ಘಟಕದ ನೂತನ, ಪ್ರಥಮ ಅಧ್ಯಕ್ಷರಾಗಿ ಪೂವರಿ ತುಳು ಮಾಸಿಕ ಪತ್ರಿಕೆ ಪ್ರಧಾನ ಸಂಪಾದಕ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಇವರನ್ನು ನಿಯುಕ್ತಿಗೊಳಿಸಿದೆ ಎಂದು ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಂ.ಟಿಪ್ಪುವರ್ಧನ ಬೆಂಗಳೂರು ಇವರು ಪ್ರಕಟಣೆ ಹೊರಡಿಸಿದ್ದಾರೆ.
1992ರಲ್ಲಿ ’ತುಳುವೆರೆ ತುಡರ್’ ಪತ್ರಿಕಾ ಮಂಡಳಿ ಸದಸ್ಯರಾಗಿ, 1999ರಲ್ಲಿ ಕೆನರಾ ಟೈಮ್ಸ್ ಪತ್ರಿಕಾ ಬಳಗದಲ್ಲಿ ಪ್ರತಿನಿಧಿಯಾಗಿ ಸೇರ್‍ಪಡೆಗೊಳ್ಳುವ ಮೂಲಕ ಪತ್ರಿಕಾ ಕ್ಷೇತ್ರಕ್ಕೆ ಕಾಲಿರಿಸಿದ ವಿಜಯಕುಮಾರ್ ಭಂಡಾರಿಯವರು ಬಂಟ್ವಾಳ ತಾಲೂಕು ಪತ್ರಕರ್ತರ ಸಂಘ, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸದಸ್ಯ, ಜನಾಂತರಂಗ, ಕರಾವಳಿ ಅಲೆ, ಕರಾವಳಿ ಮಾರುತ, ಕಾರವಲ್, ಉತ್ತರದೇಶ ಮುಂತಾದ ಪತ್ರಿಕೆಯ ವರದಿಗಾರರಾಗಿ ದಿ ಟೈಮ್ಸ್‌ ಆಫ್ ‌ಕುಡ್ಲ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.
ಸವಿತಾವಾಣಿ, ಕಚ್ಚೂರುವಾಣಿ, ತುಳುಬೊಳ್ಳಿ, ಮದಿಪು ಸಹಿತ ಅನೇಕ ಕನ್ನಡ-ತುಳು, ಮಾಸಿಕ ಪತ್ರಿಕೆಗಳ ಹವ್ಯಾಸಿ ಬರಹಗಾರರಾದ ಹೆಬ್ಬಾರಬೈಲುರವರು ಕಳೆದ ಹಲವಾರು ವರ್ಷಗಳಿಂದ ಪೂವರಿ ಪತ್ರಿಕೆಯಲ್ಲಿ ಸಂಪಾದಕರಾಗಿ ಅನುಪಮ ಸೇವೆ ಸಲ್ಲಿಸುತ್ತಿರುವುದನ್ನು ಮನಗಂಡು 2020-22ನೇ ಸಾಲಿಗೆ ಪುತ್ತೂರು ತಾಲೂಕು ಶಾಖೆಯ ಅಧ್ಯಕ್ಷರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ (ರಿ.), ಬೆಂಗಳೂರು ಕೇಂದ್ರ ಸಮಿತಿ ಪ್ರಕಟಣೆ ತಿಳಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here